ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಉಡುಪಿ ಜಿಲ್ಲಾ ಯುವ ವಿಪ್ರ ವೇದಿಕೆ ವತಿಯಿಂದ ಯುವ ಬಾಂಧವ್ಯ-2025 ಏಪ್ರಿಲ್ 26 ಮತ್ತು 27ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯಲ್ಲಿ ನಡೆಯಲಿದೆ. ಏ.26 ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಏ.27 ರವಿವಾರ ಬೆಳಿಗ್ಗೆ 8 ಗಂಟೆಗೆ ಪಥ ಸಂಚಲನ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರ ಅಡಿಗ ತಿಳಿಸಿದರು.
ಪುರುಷರಿಗಾಗಿ ಕ್ರಿಕೆಟ್, ಯುವತಿಯರಿಗಾಗಿ ಕ್ರಿಕೆಟ್, ಯುವಕರಿಗೆ ವಾಲಿಬಾಲ್, ಯುವತಿಯರಿಗೆ ತ್ರೋ ಬಾಲ್ ಸ್ಪರ್ಧೆಗಳು ನಡೆಯಲಿದೆ. ಏ.26ರ ಸಂಜೆ 4ಕ್ಕೆ ವಿಪ್ರ ಸರಿಗಮಪ ಇದರ ಫೈನಲ್ ಸ್ಪರ್ಧೆ ನಡೆಯಲಿದೆ. ಜಾನಪದ ನೃತ್ಯ ಸ್ಪರ್ಧೆ, ಫ್ಯಾಶನ್ ಶೋ, ಛದ್ಮವೇಷ ಸ್ಪರ್ಧೆ ನಡೆಯಲಿದೆ. ಏ.27ರಂದು ವೈಯಕ್ತಿಕ ಆಟಗಳು, ಹಗ್ಗ ಜಗ್ಗಾಟ, ಆಶು ಕವನ ರಚನೆ, ರಸಪ್ರಶ್ನೆ, ಚಿತ್ರಕಲೆ ಮೊದಲಾದ ಸ್ಪರ್ಧೆಗಳು ನಡೆಯಲಿದೆ ಎಂದರು.
ಕಾಶ್ಮೀರ ಭಯೋತ್ಪಾದಕ ದಾಳಿಗೆ ಖಂಡನೆ:
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಮಾತನಾಡಿದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ನಿರ್ದೇಶಕ ರಾಘವೇಂದ್ರ ಅಡಿಗ 28 ಜನರನ್ನು ಬಲಿ ಪಡೆದ ಈ ಅಮಾನವೀಯ ಕೃತ್ಯ ಖಂಡನಾರ್ಹವಾಗಿದ್ದು, ಫಾತಕಿಗಳನ್ನು ಕೂಡಲೆ ಪತ್ತೆಹಚ್ಚಿ ನಿರ್ನಾಮ ಮಾಡಬೇಕು, ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷರಾದ ಎಸ್.ಕೃಷ್ಣಾನಂದ ಚಾತ್ರ,ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್ ಉಪಸ್ಥಿತರಿದ್ದರು.