ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮೊವಾಡಿ ಮಾರ್ಗವಾಗಿ ನಾಡ, ಬಡಾಕೆರೆ, ಕೋಣ್ಕಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್‍ಗೆ ಖಾಸಗಿ ಬಸ್ ಮಾಲಕರು ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಮಾಲಕರ ಸರ್ವಾಧಿಕಾರಿ ಧೋರಣೆಯನ್ನು ಬಿಂಬಿಸುತ್ತದೆ. ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯಿಲ್ಲ. ಮತ್ತೆ ಈ ಬಸ್ ಸಂಚಾರ ಆರಂಭಿಸುವಂತಾಗಬೇಕು. ಅದಕ್ಕಾಗಿ ಇದು ಮೊದಲ ಹಂತದ ಹೋರಾಟ. ಮುಂದೆ ಕಾನೂನು ಹೋರಾಟದ ಅನಿವಾರ್ಯತೆಯೂ ಇದ್ದು, ಅದಕ್ಕಾಗಿ ಗ್ರಾಮಸ್ಥರಿಂದ ಭಿಕ್ಷೆ ಎತ್ತಿಯಾದರೂ, ಹಣ ಸಂಗ್ರಹಿಸಿ, ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಘಟಕ, ಮೊವಾಡಿ ಫ್ರೆಂಡ್ಸ್, ಜನವಾದಿ ಮಹಿಳಾ ಸಂಘಟನೆ ನಾಡ ವಲಯ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ನಾಡ ಹಾಗೂ ಮೊವಾಡಿ ವಲಯ ಹಾಗೂ ಮೊವಾಡಿ ಫ್ರೆಂಡ್ಸ್ ನೇತೃತ್ವದಲ್ಲಿ ಕುಂದಾಪುರದಿಂದ ತ್ರಾಸಿ-ಮೊವಾಡಿ- ಪಡುಕೋಣೆ, ಬಡಾಕೆರೆಯಾಗಿ ನಾಡ, ಕೋಣ್ಕಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಮತ್ತೆ ಸಂಚರಿಸುವಂತೆ ಆಗ್ರಹಿಸಿ, ನಾಡ ಗ್ರಾಮ ಪಂಚಾಯತ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬಸ್ ಸಂಚಾರ ಸಂಚಾರ ಸ್ಥಗಿತಗೊಳಿಸಿ 20 ದಿನಗಳಾಗಿವೆ. ಆದರೆ ಯಾವೊಬ್ಬ ಜನಪ್ರತಿನಿಧಿಯು ಈ ಬಗ್ಗೆ ಧ್ವನಿಯೆತ್ತಿಲ್ಲ. ಜನರೊಂದಿಗೆ ನಿಲ್ಲಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಏನೂ ಮಾತಾಡಲ್ಲ. ಬಡ ಜನರ ಬಗ್ಗೆ ಕಾಳಜಿ ವಹಿಸುವ ಕನಿಷ್ಠ ಜವಾಬ್ದಾರಿಯು ಅವರಿಗಿಲ್ಲ. ಹೋರಾಟದ ಫಲವಾಗಿ ಬಂದ ಸರಕಾರಿ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿರುವುದು ಅನ್ಯಾಯ. ಇದರ ವಿರುದ್ಧ ಬೀದಿಗಿಳಿದು, ಕಾನೂನು ಮೂಲಕ ನಿರಂತರ ಹೋರಾಟ ನಡೆಯಲಿದೆ ಎಂದವರು ಹೇಳಿದರು.
ಡಿವೈಎಫ್‍ಐ ಮುಖಂಡ ರಾಜೀವ ಪಡುಕೋಣೆ ಮಾತನಾಡಿ, ಈ ಬಸ್ ಸಂಚಾರದಿಂದ ಈ ಭಾಗದ ಹತ್ತಾರೂ ಊರಿಗೆ ಪ್ರಯೋಜನವಾಗುತ್ತಿದೆ. ಗ್ರಾಮೀಣ ಭಾಗದವರಿಗೆ ವರದಾನವಾದ ಈ ಬಸ್ ಸ್ಥಗಿತದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಬಸ್‍ಗಾಗಿ ಹೈಕೋರ್ಟ್‍ಗೂ ಹೋಗುತ್ತೇವೆ. ಬೈಂದೂರು ಕ್ಷೇತ್ರದಲ್ಲಿ ಮಾತ್ರ ಹೀಗೆ ಸರಕಾರಿ ಬಸ್‍ಗಳಿಗೆ ತಡ ತರುವ ಪ್ರಯತ್ನ ಆಗುತ್ತಿದೆ ಎಂದರು.
ಡಿವೈಎಫ್‍ಐ ಮುಖಂಡ ಫಿಲಿಪ್ ಡಿಸಿಲ್ವಾ, ಹಂಚು ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ, ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮನೋರಮಾ ಭಂಡಾರಿ, ಪಲ್ಲವಿ, ಮೊವಾಡಿ ಫ್ರೆಂಡ್ಸ್‍ನ ಶಿವಾನಂದ, ರಾಘವೇಂದ್ರ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷೆ ಗುಲಾಬಿ, ನಾಗರಾಜ್, ನಾಡ ಗ್ರಾ.ಪಂ. ಸದಸ್ಯ ಶೋಭಾ, ಪ್ರಮುಖರಾದ ರಾಜೇಶ್ ಪಡುಕೋಣೆ, ನಿಸರ್ಗ ಪಡುಕೋಣೆ, ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನಾ ನಿರತರಿಂದ ನಾಡ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಕೆಎಸ್‍ಆರ್‍ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಡಿಟಿಒ ಕಮಲ್ ಕುಮಾರ್, ಕುಂದಾಪುರ ಡಿಪೆÇ್ಪೀ ಮ್ಯಾನೇಜರ್ ರಾಜೇಶ್ ಶೆಟ್ಟಿ ಹಾಗೂ ಆರ್‍ಟಿಒ ಇಲಾಖೆಯ ಎಫ್‍ಡಿಎ ಶಾಂತರಾಜು ಅವರಿಗೆ ಮನವಿ ಸಲ್ಲಿಸಲಾಯಿತು.