ಕೋಟ :ಯಕ್ಷ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಯಕ್ಷ ಸೌರಭ, ಸಮಾಜ ಸೇವಕ ಆನಂದ್ ಸಿ ಕುಂದರ್ ಯಕ್ಷ ಸುರಭಿ ಪ್ರಶಸ್ತಿ ಪ್ರದಾನ

0
275

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಯಕ್ಷಗಾನ ಕ್ಷೇತ್ರದಲ್ಲಿಹವ್ಯಾಸಿ ಯಕ್ಷ ಕಲಾವಿದರ ಪಾತ್ರ ಗಣನೀಯವಾದದ್ದು ಎಂದು ನಾಡೋಜ ಡಾ.ಜಿ ಶಂಕರ್ ಹೇಳಿದರು.

ಅವರು ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಕೋಟದ ಯಕ್ಷಸೌರಭ ಶ್ರೀಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹವ್ಯಾಸಿ ಕಲಾವಿದರು ಯಕ್ಷಗಾನದ ಆಯಾಮಗಳ ಮೂಲಕ ಸಂಪ್ರದಾಯಕ್ಕೆ ಅನುಗುಣವಾಗಿ ಹೊಸ ಹೊಸ ಆವಿಷ್ಕಾರ ಮಾಡಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ. ಅಂತಯೇ ಯಕ್ಷಗಾನ ಕ್ಷೇತ್ರದಲ್ಲಿ ಈ ಸಂಸ್ಥೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿ ಹೊಸ ಕಲಾವಿದರಿಗೆ ಪ್ರೇರಣೆಯಾಗಿದೆ. ಪಟ್ಲ ಸತೀಶ್ ಶೆಟ್ಟಿ ಹಾಗೂ ಆನಂದ್ ಸಿ ಕುಂದರ್ ಅಂತಹ ಮಹಾನ್ ಶಕ್ತಿಗೆಗಳಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸಕರವಾಗಿದೆ ಎಂದರು.

ದಶಮಾನೋತ್ಸವದ ಅಂಗವಾಗಿ ಯಕ್ಷ ಸೌರಭ ಪ್ರಶಸ್ತಿಯನ್ನು ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಹಾಗೂ ದಶಮಾನೋತ್ಸವ ಯಕ್ಷ ಸುರಭಿ ಪ್ರಶಸ್ತಿಯನ್ನು ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರಿಗೆ ಪ್ರದಾನಿಸಲಾಯಿತು. ವಿಶೇಷ ಪುರಸ್ಕಾರವನ್ನು ನಾಡೋಜ ಡಾ.ಜಿ ಶಂಕರ್ ಇವರಿಗೆ ಪ್ರದಾನಿಸಲಾಯಿತು.

ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುವಂದನೆ ಸಲ್ಲಿಸಿತು. ಹಿರಿಯ ಹವ್ಯಾಸ ಕಲಾವಿದರಾದ ಗೋಪಾಲಕೃಷ್ಣ ಪೈ ಗಿಳಿಯಾರು, ಶಂಕರ ದೇವಾಡಿಗ ಕಾರ್ಕಡ ಇವರುಗಳನ್ನು ಸನ್ಮಾನಿಸಿತು. ದಶಮ ಗೌರವ ಯಕ್ಷಸಿರಿ ಸಮ್ಮಾನಕ್ಕೆ ಸಾಲಿಗ್ರಾಮ ಮಕ್ಕಳ ಮೇಳ, ಅಜಪುರ ಕರ್ನಾಟಕ ಸಂಘ ರಿ. ಬ್ರಹ್ಮಾವರ, ಶ್ರೀ ಲಕ್ಷ್ಮಿ ಜನಾದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ, ಶ್ರೀ ಲಕ್ಷ್ಮಿ ಜನಾದನ ಕಲಾ ಸಂಘದ ಅಂಗಡಿ ಗಜಾನನ ಯಕ್ಷಗಾನ ಕಲಾಸಂಘ ದೊಂಡೆರಂಗಡಿ, ಗಜಾನನ ಯಕ್ಷಗಾನ ಕಲಾ ಸಂಘ ತೊಟ್ಟಂ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ದರ್ಸೆ, ಯಕ್ಷ ನುಡಿ ಸಿರಿ ಸಿದ್ದಾಪುರ, ಶ್ರೀ ಮಹಾಗಣಪತಿ ಯಕ್ಷPಲಾ ಸಮಿತಿ ಮೊರ್ಟು, ಸುವರ್ಣ ಯಕ್ಷ ಬಳಗ ಕೋಟ, ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ ಕಲಾ ರಂಗ ಯಡಾಡಿ ಮತ್ಯಾಡಿ ಈ ಎಲ್ಲಾ ಸಂಘಗಳನ್ನು ಗೌರವಿಸಿಕೊಂಡಿತು.

Click Here

Click Here

ಸಭಾಧ್ಯಕ್ಷತೆಯನ್ನು ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ್ ಕೋಡಿ ವಹಿಸಿದ್ದರು.

ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಯಕ್ಷ ಸೌರಭ ಪ್ರಶಸ್ತಿಯನ್ನು ಪ್ರಧಾನಿಸಿ, ಯಕ್ಷ ಸುರಭಿ ಪ್ರಶಸ್ತಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರದಾನಿಸಿದರು.

ಮುಖ್ಯಅಭ್ಯಾಗತರಾಗಿ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಕೆ. ಎಸ್. ಕಾರಂತ್, ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ, ಕೋಡಿ ಕನ್ಯಾಣದ ಶ್ರೀರಾಮಾಂಜನೇಯ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಕೋಡಿ, ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ನ್ಯಾಯವಾದಿ ಮಂಜುನಾಥ ಗಿಳಿಯಾರು, , ಯಕ್ಷಸೌರಭದ ಗೌರವ ಸಲಹೆಗಾರರಾದ ಭೋಜ ಪೂಜಾರಿ, ರಾಘವೇಂದ್ರ ಕಾಂಚನ್ ಬಾರಿಕೆರೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶ್ರೀನಾಥ್ ಉರಾಳ ಸ್ವಾಗತಿಸಿದರು. ಕಾರ್ಯಕ್ರಮವನ್ನು ಟಿ.ವಿ ನಿರೂಪಕ ಪ್ರಣುತ್ ಗಾಣಿಗ ನಿರೂಪಿಸಿದರು. ಸ್ಥಾಪಾಕಾಧ್ಯಕ್ಷ ಹರೀಷ್ ಭಂಡಾರಿ ವಂದಿಸಿದರು.

ಸಂಜೆ ಗಂಟೆ 4.00ರಿಂದ ತೆಂಕು ಬಡಗಿನ ಪ್ರಸಿದ್ದ ಕಲಾವಿದರಿಮದ ಗಾನ ಸೌರಭ, ಸಭಾ ಕಾರ್ಯಕ್ರಮದ ನಂತರ ತೆಂಕು ಬಡಗಿನ ಹವ್ಯಾಸಿ ಕಲಾವಿದರಿಂದ ದ್ರೌಪದೀ ಪ್ರತಾಪ, ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Click Here

LEAVE A REPLY

Please enter your comment!
Please enter your name here