ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ ‘ಯುತ್ ರೆಡ್‍ಕ್ರಾಸ್ ವಿಂಗ್’ ಅನ್ನು ಉದ್ಘಾಟಿಸಲಾಯಿತು. ಘಟಕವನ್ನು ಉದ್ಘಾಟಿಸಿದ ಕುಂದಾಪುರದ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಸಭಾಪತಿ ಜಯಕರ ಶೆಟ್ಟಿ ಇವರು “ಅತೀ ಹಿನ್ನಲೆಯಿರುವ ರೆಡ್‍ಕ್ರಾಸ್ ಸೊಸೈಟಿಯ ಉಗಮ, ವಿಸ್ತಾರವು ಜಗತ್ತಿನಾದ್ಯಂತ ಆದುದು ಮಾತ್ರವೇ ಅಲ್ಲದೆ ಶಾಂತಿ ಸೌಹಾರ್ಧತೆಯನ್ನು ಕಾಪಾಡುವ ಸಾಮಾಜಿಕ ಕಳಕಳಿಯ ಸಂಸ್ಥೆ ಎನ್ನುವುದಕ್ಕೆ ನಮಗೆಲ್ಲ ಅತೀವವಾದ ಹೆಮ್ಮೆಯ ವಿಚಾರ” ಎಂದು ನುಡಿದರು.
ಸತ್ಯನಾರಾಯಣ ಪುರಾಣಿಕ್ ಇವರು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್ “ಇಂದಿನ ಯುವಜನತೆಯನ್ನು ಸಮಾಜಮುಖಿ ಕಾರ್ಯದತ್ತ ಕೊಂಡೊಯ್ಯುವ ಘಟಕ ಈ ರೆಡ್ ಕ್ರಾಸ್ ಘಟಕ, ಮೊಬೈಲ್‍ನ ಗೀಳು ಬಿಟ್ಟು ಸಮಾಜಮುಖಿಯಾಗಿ ತಮ್ಮನ್ನು ಸಮರ್ಪಿಸಿಕೊಂಡು ನೆಮ್ಮದಿಯಾಗಿ ಬದುಕಿ” ಎಂದರು. ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ ಹಾಗೂ ಅಬ್ದುಲ್ ಬಶೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುತ್ ರೆಡ್‍ಕ್ರಾಸ್ ಘಟಕದ ಉಸ್ತುವಾರಿ ಉಪನ್ಯಾಸಕ ಅಹ್ಮದ್ ಖಲೀಲ್ ಸ್ವಾಗತಿಸಿ, ಘಟಕದ ವಿದ್ಯಾರ್ಥಿ ಮುಖಂಡ ಫಿಝಾನ್ ವಂದಿಸಿದರು. ಕುಮಾರಿ ಶೈಮಾ ಕಾರ್ಯಕ್ರಮ ನಿರೂಪಿಸಿದರು.