ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜನತಾ ಸಮೂಹ ಸಂಸ್ಥೆಯ ಸಾಮಾಜಿಕ ಬದ್ಧತೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೀತಾನಂದ ಪೌಂಡೇಶನ್ ಮತ್ತು ಜನತಾ ಸಿಬ್ಬಂದಿಗಳು ಆನಂದ ಸಿ. ಕುಂದರ್ ಅವರ ಮಾರ್ಗದರ್ಶನದಂತೆ ಪಡುಕರೆಯಲ್ಲಿ 51ನೇ ಭಾನುವಾರದ ಸ್ವಚ್ಛತೆ ಸೇವೆ ನಡೆಸಿದರು.
ಈ ಸಂದರ್ಭದಲ್ಲಿ ಕೋಟ ಪಡುಕೆರೆಯ ಸಮುದ್ರ ತೀರವನ್ನು ಸ್ವಚ್ಛಗೊಳಿಸಿ ಕಸವನ್ನು ಸಂಗ್ರಹಿಸಲಾಯಿತು.
ಸ್ವಚ್ಛತೆ ಸೇವೆಯ ನಂತರ ಕಡಲ ತೀರದಲ್ಲಿ ಸರಳ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಬೃಹತ್ ಬಿತ್ತಿ ಚಿತ್ರವನ್ನು ಸಂಸ್ಥೆಯ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರ 77ನೇ ಹುಟ್ಟು ಹಬ್ಬದ ಮತ್ತು 50 ವಾರಗಳ ಆನಂದ ಸೃಷ್ಟಿ ಕಾರ್ಯಕ್ರಮದಡಿ ಕುಂದರ್ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟದ ವಿವೇಕ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಜಗದೀಶ್ ನಾವಡ, ಜನತಾ ಸಮೂಹ ಸಂಸ್ಥೆಗಳ ನಿರ್ದೇಶಕರುಗಳಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಪ್ರದೀಪ್ ಪಡುಕೆರೆ, ಸ್ಥಳೀಯ ಮತ್ಸ್ಯೋದ್ಯಮಿ ಪ್ರಭಾಕರ್ ಎಚ್ ಕುಂದರ್, ಗೀತಾನಂದ ಟ್ರಸ್ಟ್ ಸದಸ್ಯರುಗಳಾದ ದಿವ್ಯಲಕ್ಷ್ಮಿ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್ ಮತ್ತು ಜನತಾ ಸಂಸ್ಥೆಯ ಎ.ಜಿ.ಎಂ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕರುಗಳಾದ ಮಿಥುನ್ ಕುಮಾರ್, ಸಂತೋಷ್ ಉಪಸ್ಥಿತರಿದ್ದರು. ಗೀತಾನಂದ ಸಂಸ್ಥೆಯ ದೀಕ್ಷಿತ ನಿರೂಪಿಸಿ, ರವಿಕಿರಣ್ ಕೋಟ ವಂದಿಸಿದರು.