ಮೂಡ್ಲಕಟ್ಟೆ ಎಂ ಐ ಟಿ: ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ

0
653

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಮೂಡ್ಲಕಟ್ಟೆ ಕಾಲೇಜಿನಲ್ಲಿ ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ನರ್ಸಿಂಗ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕರಾಟೆ ಅಸೋಸಿಯೇಷನ್ ಕರ್ನಾಟಕ ಇದರ ಕಾರ್ಯದರ್ಶಿ, ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಅಧ್ಯಕ್ಷರು, ಹಾಗು 5 ಡಾನ್ ಬ್ಲಾಕ್ ಬೆಲ್ಟ್, ವರ್ಲ್ಡ್ ಕರಾಟೆ ಫೆಡರೇಶನ್ ತರಬೇತುದಾರ ಕೀರ್ತಿ ಜಿ.ಕೆ ಇವರು ಅನಿರೀಕ್ಷಿತವಾಗಿ ನಡೆಯುವ ಘಟನೆ ಸಂದರ್ಭದಲ್ಲಿ ಹೇಗೆ ಪಾರಾಗಬೇಕು, ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎನ್ನುವ ಕುರಿತು ಸ್ವಯಂ ರಕ್ಷಣೆ ಕೌಶಲ ಪ್ರಾತ್ಯಕ್ಷಿಕೆ ನೀಡಿದರು.

ಕರಾಟೆ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ಆಟಗಾರರಾಗಿರುವ ಮತ್ತು ಸ್ವಯಂ ರಕ್ಷಣಾ ತರಬೇತುದಾರರಾಗಿರುವ ಅಂಕಿತ ಬಿ. ಟಿ ಮತ್ತು ಉಡುಪಿ ಜಿಲ್ಲೆಯ ಕರಾಟೆ ಅಸೋಸಿಯೇಷನ್ ಡೈರೆಕ್ಟರ್ ಮತ್ತು ಮೂಡಲಕಟ್ಟೆ ಕಾಲೇಜಿನ ಸಿಬ್ಬಂದಿ ಆಗಿರುವ ಅಕ್ಷಯ್ ಪೂಜಾರಿ ಅವರು ಮಕ್ಕಳಿಗೆ ತರಬೇತಿ ನೀಡಿದರು.

Click Here

ಕಾಲೇಜಿನ ಪ್ರಾಂಶುಪಾಲರು,ಉಪ ಪ್ರಾಂಶುಪಾಲರು ಕಾಲೇಜಿನ ಡೀನ್, ಸಿಬಂದಿ ವರ್ಗ ಹಾಗು ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here