ಕೋಟತಟ್ಟು – ಸ್ವಚ್ಛಭಾರತದ ಪರಿಕಲ್ಪನೆಗೆ ಟೊಂಕಕಟ್ಟಿದ ಕೋಟತಟ್ಟು ಗ್ರಾಮಪಂಚಾಯತ್- ಎಸ್‍ ಎಲ್‍ ಆರ್ ಎಮ್ ಘಟಕಕ್ಕೆ ಚಾಲನೆ

0
1033

ಕುಂದಾಪುರ ಮಿರರ್ ಸುದ್ದಿ…
ಕೋಟ:
ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಸ್ವಚ್ಛ ಭಾರತದ ಪರಿಕಲ್ಪನೆಗೆ ಟೊಂಕಟ್ಟಿ ಒಂದು ಹೆಜ್ಜೆ ಮುಂದಿರಿಸಿದೆ.


ಕೇಂದ್ರದ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ್ ಶ್ರೇಷ್ಠ ಭಾರತ ಯೋಜನೆಯಡಿ ಆಯಾ ಭಾಗಗಳ ಪಂಚಾಯತ್‍ಗಳು ಎಸ್‍ಎಲ್‍ಆರ್‍ಎಮ್ ಘಟಕಗಳ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಅಣಿಯಾಗಿದ್ದು ಅದರಂತೆ ಸೋಮವಾರ ಕೋಟತಟ್ಟು ಗ್ರಾಮಪಂಚಾಯತ್ ಮನೆಮನೆಗಳಿಗೆ ಬೆಕೆಟ್ ನೀಡುವ ಮೂಲಕ ಒಣ ಕಸವನ್ನು ಕಲೆಹಾಕಿ ಎಸ್‍ಎಲ್‍ಆರ್‍ಎಮ್ ಘಟಕ್ಕೆ ಚಾಲನೆ ನೀಡಿತು.

ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿ ಮಾತನಾಡಿ ದೇಶದ ಪ್ರಧಾನಿ ನಿರ್ದೇಶನದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಸಹಕರಿಸಬೇಕಾಗಿದೆ.
ನಮ್ಮಪರಿಸರಕ್ಕೆ ಹಾನಿಯುಂಟುಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಮಿತವಾಗಿ ಬಳಸಿ ಸ್ವಚ್ಛಭಾರತದ ಪರಿಜ್ಞಾನ ಹೆಚ್ಚಿಸಿಕೊಳ್ಳಿ,ಪ್ಲಾಸ್ಟಿಕ್ ಸುಡುವ ಕೆಲಸಕ್ಕೆ ಕೈಹಾಕದಿರಿ ಎಂದರಲ್ಲದೆ ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ.ಮನೆಯಲ್ಲಿ ಉಪಯೋಗಿಸುವ ಹಸಿಕಸವನ್ನು ತಮ್ಮ ತೋಟಗಳಿಗೆ ಉಪಯೋಗಿಸಿ ಒಣತ್ಯಾಜ್ಯವನ್ನು ಪಂಚಾಯತ್ ನೀಡಿದ ಬೆಕೆಟ್‍ಗಳಲ್ಲಿ ಶೇಖರಿಸಿ ಪಂಚಾಯತ್‍ಗೆ ನೀಡಿರಿ ಈ ಸಂದರ್ಭದಲ್ಲಿ ಪಂಚಾಯತ್ ಒಂದು ಹೆಜ್ಜೆ ಶುಚಿತ್ವದೆಡೆಗೆ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

Click Here

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್ ವಹಿಸಿದ್ದರು. ಕೋಟೇಶ್ವರ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಸುಪಾಲ ಸೀತಾರಾಮ್ ಮಧ್ಯಸ್ಥ, ಕೋಟ ಜಾಮೀಯಾ ಮಸೀದಿಯ ಬಷೀರ್ ಸಾಹೇಬ್, ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ,ಸದಸ್ಯರಾದ ಸತೀಶ್ ಕುಂದರ್,ವಿದ್ಯಾ ಸಾಲಿಯಾನ್ , ಸಾಹಿರಾಬಾನು,ರಾಬರ್ಟ್ ನಾಯಕ್,ಸರಸ್ವತಿ ಪೂಜಾರಿ,ಎಚ್ ಪ್ರಮೋದ್ ಹಂದೆ, ಎಸ್‍ಎಲ್‍ಆರ್‍ಎಮ್ ಘಟಕ ವಿಲೇವಾರಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲ ಎಸ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಸದಸ್ಯ ರವೀಂದ್ರ ತಿಂಗಳಾಯ ವಂದಿಸಿದರು.

Click Here

LEAVE A REPLY

Please enter your comment!
Please enter your name here