ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್‍ನ ನಿವಾಸಿ ಪ್ರೇಮ ಕೋಂ. ರಾಜು ಕುಂದರ್ ರವರ ಮನೆ ನ.04 ರಂದು ಭಾರಿ ಮಳೆಯ ಕಾರಣ ತೆಂಗಿನ ಮರ ಬಿದ್ದು, ಭಾಗಶ: ಹಾನಿಯಾಗಿದ್ದು, ಈ ಪ್ರಯುಕ್ತ ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ನಿಧಿಯಡಿ ಡಿ.06 ರಂದು ರೂ 95,100/- ಚೆಕ್‍ನ್ನು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ನೇತೃತ್ವದಲ್ಲಿ ಪ್ರೇಮ ಇವರಿಗೆ ಹಸ್ತಾಂತರಿಸಲಾಯಿತು.ಗ್ರಾ ಪಂ. ಸದಸ್ಯ ಅಂತೋನಿ ಡಿಸೋಜಾ , ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ , ಗ್ರಾಮ ಸಹಾಯಕಿ ಸರೋಜಾ, ಸ್ಥಳೀಯರಾದ ವಾಸು ಕರ್ಕೇರಾ ಉಪಸ್ಥಿತಿತರಿದ್ದರು.