ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಗ್ರಾ ಪಂ. ವ್ಯಾಪ್ತಿಯಲ್ಲಿ ಮೊದಲ ಡೋಸ್ ಕೊರೋನಾ ಲಸಿಕೆ ಬಾಕಿ ಇರುವ ಗ್ರಾಮಸ್ಥರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಬಗ್ಗೆ ಇತ್ತೀಚಿಗೆ ಗ್ರಾಮ ಪಂ. ಕಛೇರಿ ಪೂರ್ವಭಾವಿ ಸಭೆ ನಡೆಸಿ, ಡಿ.23 ರಂದು ಮನೆ-ಮನೆ ಭೇಟಿ ನೀಡಿ ಲಸಿಕೆ ನಿರಾಕರಿಸಿದವರ ಮನವೊಲಿಸಿ ಲಸಿಕೆ ನೀಡಲಾಯಿತು.
ಬ್ರಹ್ಮಾವರ ತಹಶೀಲ್ದಾರ ರಾಜಶೇಖರಮೂರ್ತಿ ಮಾರ್ಗದರ್ಶನದಲ್ಲಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ನೇತೃತ್ವದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಚ್ಚಿದಾನಂದ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ, ಸತೀಶ್ ಜಿ ಕುಂದರ್,ಗೀತಾ ಖಾರ್ವಿ, ಗ್ರಾಮ ಕರಣೀಕರು ಗಿರೀಶ, ಗ್ರಾಮ ಸಹಾಯಕಿ ಸರೋಜಾ, ಬಿಲ್ ಕಲೆಕ್ಟರ್ ಜಯ, ಅಂಗನವಾಡಿ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು,ಪ್ರಮುಖರು ಉಪಸ್ಥಿತರಿದ್ದರು.