ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವ್ಯಕ್ತಿಯೊಬ್ಬರ ಸಾಧನೆಯನ್ನು ಮುಂದಿನ ಪೀಳಿಗೆಗೆ ನೆನಪಿಸಿಕೊಡುವುದು ಶ್ಲಾಘನಾರ್ಹ ಕಾರ್ಯ. ಅಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಂಥಹ ಸಹಕಾರ ಸಂಸ್ಥೆಯೊಂದನ್ನು ಹುಟ್ಟುಹಾಕಿರುವುದು ದೊಡ್ಡ ಸಾಧನೆಯಾಗಿದೆ. ಅಂತಹ ಸಾಧಕರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಅವರ ಸಾಧನೆಯನ್ನು ನೆನಪಿಸಿಕೊಳ್ಳುವುದು ಸಹಕಾರ ವ್ಯವಸ್ಥೆಯಲ್ಲಿ ಅನುಕರಣೀಯವಾದ ಕಾರ್ಯವೆಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಮಾನಂಜೆ ಇಲ್ಲಿ ಸ್ಥಾಪಿಸಲಾದ ಸಂಘದ ಸ್ಥಾಪಕರಾದ ಸ್ಥಾಪಕ ದಿ.ಮಾನಂಜೆ ನಾರಾಯಣ ರಾವ್ ಸ್ಮಾರಕ ಶಿಲಾ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಶಂಕರನಾರಾಯಣ ಯಡಿಯಾಳ ವಹಿಸಿ, ಸಂಘದ ಸ್ಥಾಪಕರಾದ ದಿ.ನಾರಾಯಣ ರಾವ್ ಪುತ್ಥಳಿ ಸ್ಥಾಪನೆಗೆ ಎರಡು ವರ್ಷದ ಹಿಂದೆ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಲಾಯಿತು. ಈಗ ಅದರ ಅನಾವರಣಕ್ಕೆ ಕಾಲ ಕೂಡಿ ಬಂದಿದೆ. ಈ ಸಂಘದ ಸ್ಥಾಪನೆ, ಬೆಳವಣಿಗೆಯಲ್ಲಿ ನಾರಾಯಣ ರಾವ್ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಸಾಧನೆಯನ್ನು ಗೌರವಿಸಿ, ಸದಾ ಅವರನ್ನು ಸ್ಮರಿಸಿ ಮುನ್ನೆಡೆಯುವುದು ಈ ಸಹಕಾರ ಸಂಸ್ಥೆಗೆ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಶ್ರೀಕಾಂತ್ ಸಿದ್ದಾಪುರ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತರಲಾದ ‘ಮಾನಂಜೆ ಮಾಣಿಕ್ಯ’ ಕೃತಿಯನ್ನು ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಎ.ಗೋಪಾಲಕೃಷ್ಣ ಕೊಡ್ಗಿ ಬಿಡುಗಡೆ ಮಾಡಿದರು.
ಕಮಲಶಿಲೆ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ನಾಗಪ್ಪ ಪೂಜಾರಿ, ಜನರಲ್ ಮೆನೇಜರ್ ಎನ್.ಶ್ರೀನಿವಾಸ, ನಿರ್ದೇಶಕರಾದ ರವಿ ಗಾಣಿಗ, ಎಂ.ಎಸ್.ವಿಷ್ಣುಮೂರ್ತಿ, ಹೆಚ್.ರಾಜೀವ ಪೂಜಾರಿ, ರತ್ನಾಕರ ಶೆಟ್ಟಿ, ಜಯರಾಮ ನಾಯ್ಕ, ರಘುರಾಮ ಶೆಟ್ಟಿ, ಶ್ರೀಮತಿ ಅಂಬಿಕಾ ಮಯ್ಯ, ಶ್ರೀಮತಿ ಜ್ಯೋತಿ, ಇ.ಸುಬ್ರಾಯ ಹೆಗ್ಡೆ, ಎಸ್.ರಾಜು, ಯು.ಕರುಣಾಕರ ನಾಯ್ಕ, ಯು.ಪ್ರಭಾಕರ ನಾಯ್ಕ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎ.ಉದಯ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿ.ನಾರಾಯಣ ರಾವ್ ಅವರ ಮಕ್ಕಳಾದ ಡಾ.ಜಯಚಂದ್ರ ಶೆಟ್ಟಿ, ರಾಘವೇಂದ್ರ ರಾವ್, ಡಾ.ರವೀಂದ್ರನಾಥ ರಾವ್, ಸದಾಶಿವ ರಾವ್, ವಾಣಿ ಸುರೇಶ್ ಅವರನ್ನು ಗೌರವಿಸಲಾಯಿತು. ಸಂಘದ ನಿವೃತ್ತ ಸಿಬ್ಬಂದಿ ಶಂಕರ ಕೊಠಾರಿ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು. ಪುತ್ಥಳಿ ತಯಾರಿಸಿದ ಶಿಲ್ಪಿ ನಾಗೇಶ ಆಚಾರ್ಯ ಕಾರ್ಕಳ ಅವರನ್ನು ಗೌರವಿಸಲಾಯಿತು.
ಮಂಜುನಾಥ ನಾಯ್ಕ ಸ್ವಾಗತಿಸಿ, ಎನ್.ಶ್ರೀನಿವಾಸ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾಶಿವ ಭಟ್ ಮತ್ತು ಕೆ.ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.