ಕುಂದಾಪುರ ಮಿರರ್ ಸುದ್ದಿ…
ತೆಕ್ಕಟ್ಟೆ: ಏಕನ ಪ್ರೊಡಕ್ಷನ್ಸ್ ವತಿಯಿಂದ “ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ” ಎಂಬ ಶೀರ್ಪಿಕೆಯಡಿಯಲ್ಲಿ ಕುಂದಾಪುರ ಕನ್ನಡದ ಆಲ್ಬಮ್ ಗೀತೆಯನ್ನು ಕನ್ನಡ ಖ್ಯಾತ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಅವರಿಂದ ಯುವ ನಿರ್ದೇಶಕ ಪ್ರಹ್ಲಾದ್ ಆಚಾರ್ಯ ಯೂಟ್ಯೂಬ್ ಚಾನೆಲ್‌ನಲ್ಲಿ ಜ.೪ ರಂದು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಕುಂದಾಪುರದ ಭಾಷೆಯಲ್ಲಿನ ” ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ ” ಎನ್ನುವ ಅದ್ಭುತ ಆಲ್ಬಮ್ ಸಾಂಗ್ ಅನ್ನು ಕುಂದಾಪುರದ ಪ್ರತಿಭೆ ಪ್ರಹ್ಲಾದ್ ಆಚಾರ್ಯ ಅರಾಟೆ ಹಾಗೂ ಚಿತ್ರತಂಡವು ಬನವಾಸಿ, ಹೆಮ್ಮಾಡಿ, ಅರಾಟೆ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣಗೊಳಿಸುವ ಮೂಲಕ ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಗ್ರಾಮೀಣ ಪ್ರತಿಭೆಗಳ ಭವಿಷ್ಯವನ್ನು ಪ್ರತಿಬಿಂಬಿಸುತ್ತಿದೆ. ಕುಂದಾಪುರದಂತಹ ಗ್ರಾಮೀಣ ವಿಭಾಗದಲ್ಲಿ ಒಂದು ಉತ್ತಮ ತಂಡವನ್ನು ಕಟ್ಟಿಕೊಂಡು ಕುಂದಾಪ್ರ ಕನ್ನಡ ಹಾಗೂ ತುಳು ಭಾಷೆಯಲ್ಲಿ ಒಂದು ಅದ್ಭುತ ಸಂಗೀತ ಹೊರಬಂದಿದೆ. ಮುಂದಿನ ದಿನಗಳಲ್ಲಿ ಕುಂದಾಪ್ರ ಕನ್ನಡದ ಸಂಗೀತಗಳು ಹೆಚ್ಚು ಹೆಚ್ಚು ಮೂಡಿಬರಲಿ, ಮದುವೆ ಮೆಹಂದಿಗಳಂತಹ ಸಂತಸದ ಕ್ಷಣಗಳಲ್ಲಿ ಇಂತಹ ಕಂದಾಪ್ರ ಕನ್ನಡದ ಸಂಗೀತಗಳು ಬಳಕೆಯಾಗಲಿದೆ. ಯುವ ತಂಡಗಳ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಆಲ್ಬಮ್ ಗೀತೆ ನಿರ್ಮಾಪಕರಾದ ರಮೇಶ್ ಆಚಾರ್ಯ ಅರಾಟೆ, ಗಾಯತ್ರಿ ರಮೇಶ್ ಆಚಾರ್ಯ, ನಿರ್ದೇಶಕದ ಪ್ರಹ್ಲಾದ್ ಆಚಾರ್ಯ, ಸಹ ನಿರ್ದೇಶಕ ಹರೀಶ್ ಎಂ.ಖಾರ್ವಿ, ಸಂಗೀತ ನಿರ್ದೇಶಕ ಗೌತಮ್. ಕೆ.ಛಾಯಾಗ್ರಾಹಕರಾದ ಪ್ರವೀಣ್ ನಾಡ, ಜಯರಾಮ ಆಲೂರು, ವಿನ್ಯಾಸಕಾರ ತಕ್ಷಕ್ , ಕಲಾವಿದ ಸತ್ಯನಾರಾಯಣ ಆಚಾರ್ಯ, ಮಂಜುನಾಥ ಸಾಲಿಯಾನ್, ರಸಿಕ್ ಶೆಟ್ಟಿ, ಪ್ರದೀಪ್ ಮಾರ್ಗೋಳಿ , ಶರಣ್ ಮತ್ತಿತರರು ಉಪಸ್ಥಿತರಿದ್ದರು.