ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರಮ ಜೀವಿಗಳಾದ ಟೈಲರ್ ಗಳನ್ನು ಸರ್ಕಾರ ಗುರ್ತಿಸಿದೆ. ಆದರೆ, ಸರ್ಕಾರದ ಸೌಲಭ್ಯಗಳು ಯಾವುವೂ ಟೈಲರ್ ಗಳಿಗೆ ಸಿಗುತ್ತಿಲ್ಲ. ಕಾರಣ ನಮ್ಮ ಸಂಘಟನೆ ಸಶಕ್ತವಾಗಿಲ್ಲ. ಆದ್ದರಿಂದ ರಾಜ್ಯ ಟೈಲರ್ ಅಸೋಸಿಯೇಷನ್ ಸಂಘಟನಾತ್ಮಕವಾಗಿ ಬಲಗೊಳ್ಳುವುದು ಇಂದಿನ ಅಗತ್ಯ ಎಂದು ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ನ ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಶೆಟ್ಟಿ ಹೇಳಿದರು.
ಅಸೋಸಿಯೇಷನ್ ನ ಕೋಟೇಶ್ವರ ವಲಯ ಸಮಿತಿಯ 21ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸಮಿತಿ ಕೋಶಾಧಿಕಾರಿ ಕೆ. ರಾಮಚಂದ್ರ ಮಾತನಾಡಿ, ಈ ಸಂಘಟನೆ ಟೈಲರ್ ಗಳ ಅಭ್ಯುದಯಕ್ಕಾಗಿದೆ. ಆದ್ದರಿಂದ ಅಸೋಸಿಯೇಷನ್ ಗೆ ಸೇರಲು ಯಾರ ಒತ್ತಾಯದ ಅವಶ್ಯಕತೆಯಿಲ್ಲ. ನಮ್ಮ ಸಂಘಟನೆ ಬಲಗೊಂಡರೆ ನಮ್ಮ ಭವಿಷ್ಯ ಉಜ್ವಲವಾಗುತ್ತದೆ. ಶೀಘ್ರ ರಾಜ್ಯ ಸಮಿತಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತದೆ. ಎಲ್ಲ ಕ್ಷೇತ್ರ, ವಲಯ ಸಮಿತಿಗಳು ಸಹಕರಿಸಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆನೀಡಿದರು.
ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಪಾಲನ್, ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವ ಆರ್. ಪೂಜಾರಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಹೇಮಾ ಮಾತನಾಡಿ ಟೈಲರ್ ಗಳ ಸಂಘಟನೆಯ ಅಗತ್ಯವನ್ನು ವಿವರಿಸಿದರು.
ಕುಂದಾಪುರ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಸುಧಾಕರ ಎಂ., ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಮದುಸೂಧನ್ ಆಚಾರ್
ಶುಭ ಕೋರಿದರು.
ಹಿರಿಯ ಟೈಲರ್ ಗಳಾದ ಭಾಷಾ, ಕೋಟೇಶ್ವರ, ಪುಂಡಲೀಕ ಕಿಣಿ, ಕೋಟೇಶ್ವರ, ಅಸ್ಸಿ ಕುಟ್ಟಿ ಜಾನ್, ಕೆದೂರು ಮತ್ತು ಜನಾರ್ದನ ಆಚಾರ್ಯ ತೆಕ್ಕಟ್ಟೆ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೋಟೇಶ್ವರ ವಲಯಾಅಧ್ಯಕ್ಷ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ವಲಯ ಸಮಿತಿ ಸ್ಥಾಪಕಾಧ್ಯಕ್ಷ ರತ್ನಾಕರ ಶುಭ ಹಾರೈಸಿದರು. ವಿವಿಧ ವಲಯ, ಕ್ಷೇತ್ರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರೇಮಾ ಶೆಟ್ಟಿಗಾರ್ ಪ್ರಾರ್ಥಿಸಿದರು. ದಿನೇಶ್ ಸ್ವಾಗತಿಸಿ, ವರದಿ ಓದಿದರು. ಆಶಾ ಗೋಪಾಡಿ ಆಯ – ವ್ಯಯ ವರದಿ ಓದಿದರು. ಶ್ರೀಧರ ಆಚಾರ್, ಮಂಜುನಾಥ, ನಾಗೇಶ್, ನಿತ್ಯಾನಂದ, ಸೀತಾರಾಮ ಆಚಾರ್ಯ, ಆಶಾ ಗೋಪಾಡಿ, ರಮೇಶ್ ಗಣ್ಯರನ್ನು ಗೌರವಿಸಿದರು.
ಕೋಟೇಶ್ವರ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಶ್ರೀಧರ ಬಳೆಗಾರ್ ಕಾರ್ಯಕ್ರಮ ನಿರೂಪಿಸಿದರು.