ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅಸಂಘಟಿತ ಅಡುಗೆ ಕಾರ್ಮಿಕರು ಮತ್ತು ಸಹಾಯಕರ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮವು ಬಿದ್ಕಲ್ಕಟ್ಟೆಯ ಶ್ರೀ ನಾಗಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಾಘವೇಂದ್ರ ಅಡಿಗ ಸಭಾಧ್ಯಕ್ಷತೆ ವಹಿಸಿ, ಸಂಘದ ಧ್ಯೇಯೋದ್ದೇಶ ಹಾಗೂ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಕೊಡಲ್ಪಡುವ ಇ – ಶ್ರಮ್ ಕಾರ್ಡುಗಳ ಬಗ್ಗೆ ವಿವರಿಸಿದರು. ಪ್ರತಿಯೊಬ್ಬ ಸದಸ್ಯನೂ ಕಾರ್ಡ್ ಹೊಂದುವಂತೆ ಸಲಹೆ ಮಾಡಿದರು.
ಸಂಘದ ಗೌರವಾಧ್ಯಕ್ಷ ಅರವಿಂದ ಐತಾಳ, ಕೋಟೇಶ್ವರ ಪ್ರಾಸ್ತಾವಿಕ ಮಾತನಾಡಿ ಸದಸ್ಯರ ಸಹಕಾರ ಕೋರಿದರು.
ಉಪಾಧ್ಯಕ್ಷರುಗಳದ ಗಣೇಶ್ ಉಪಾಧ್ಯ,ಬಳ್ಕೂರು ಮತ್ತು ಅನ್ನಪೂರ್ಣ ಕಾರಂತ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಿವಾನಂದ ಅಡಿಗ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.