ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅತಿ ಉದ್ದದ ಸಮುದ್ರ ಕಿನಾರೆ ಕೋಡಿಯಲ್ಲಿದ್ದು ಸುವ್ಯವಸ್ಥಿತವಾಗಿ ಉದ್ಯಾನವನ ನಿರ್ಮಿಸಲಾಗಿದೆ. ಇದನ್ನು ಪ್ರತಿವರ್ಷ ಸಮಸ್ಥಿತಿಯಲ್ಲಿಟ್ಟು ಜನರಿಗೆ ಉಪಯೋಗಕ್ಕೆ ದೊರೆಯುವಂತೆಯೂ ಮಾಡಬೇಕಿದೆ ಎಂದು ಡಿವೈಎಸ್‍ಪಿ ಶ್ರೀಕಾಂತ ಕೆ. ಹೇಳಿದರು.
ಅವರು ಬುಧವಾರ ಅಪರಾಹ್ನ ಕೋಡಿ ಸಾರ್ವಜನಿಕ ಆಸ್ಪತ್ರೆ ಹತ್ತಿರ ಫ್ರೆಂಡ್ಸ್ ಗಾರ್ಡನ್ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮೂಲಭೂತ ಸೌಕರ್ಯಗಳ ಒದಗಣೆ ಜತೆಗೆ ಉದ್ಯಾನವನದಂತಹ ಅವಶ್ಯಗಳನ್ನು ಕೊಡುವುದು ಕೂಡಾ ಪುರಸಭೆಯ ಪಾಲಿಗೆ ಜನಸೇವೆಯೇ ಆಗಿದೆ ಎಂದರು.
ಎಸ್‍ಐ ಸದಾಶಿವ ಗವರೋಜಿ, ನಿವೃತ್ತ ಬಿಎಸ್‍ಎ-ï ಯೋಧ ರಾಮ ಕೆ. ದೇವಾಡಿಗ, ನಿವೃತ್ತ ಯೋಧ ದಯಾನಂದ, ಕೋಟೆ ಜಟ್ಟಿಗೇಶ್ವರ ಯುವಕ ಮಂಡಲ ಹಾಗೂ ಫ್ರೆಂಡ್ಸ್ ಗಾರ್ಡನ್ ಅಧ್ಯಕ್ಷ ಕೆ.ಎಚ್. ರಾಜೇಂದ್ರ ಶೇರೆಗಾರ್, ರೈತ ಮುಖಂಡ ಶಂಕರ ಪೂಜಾರಿ, ಎ.ಪಿ.ಎಂ.ಸಿ.ಉಪಾಧ್ಯಕ್ಷ ಗಣೇಶ್ ಶೇರಿಗಾರ್, ಮಾಜಿ ಸದಸ್ಯ ಕೋಟೆ ಪ್ರಭಾಕರ ಶೇರೆಗಾರ್, ಸಾರ್ವಜನಿಕ ಆಸ್ಪತ್ರೆ ಕೋಡಿ ವೈದ್ಯಾ„ಕಾರಿ ಡಾ| ಉಮೇಶ್ ನಾಯಕ್, ಪುರಸಭೆ ಸದಸ್ಯರಾದ ಲಕ್ಷ್ಮೀ ಬಾಯಿ, ಕಮಲ ಮಂಜುನಾಥ ಪೂಜಾರಿ, ನಾಮನಿರ್ದೇಶಿತ ಸದಸ್ಯ ನಾಗರಾಜ ಕಾಂಚನ್, ಉದ್ಯಮಿ ನಾಗರಾಜ ಶ್ರೀಯಾನ್, ಉಮೇಶ್ ಮಾಸ್ಟರ್ ಉಪಸ್ಥಿತರಿದ್ದರು.
ಉದ್ಯಾನವನದಲ್ಲಿ ಸಿಮೆಂಟ್ ಬೆಂಚುಗಳನ್ನೂ ಅಳವಡಿಸಲಾಗಿದ್ದು ದೀಪದ ವ್ಯವಸ್ಥೆ, ನೀರಿನ ವ್ಯವಸ್ಥೆ, ಹೂದೋಟ, ಮಕ್ಕಳಿಗೆ ಆಟವಾಡಲು ಉಯ್ಯಾಲೆಯೇ ಮೊದಲಾದವುಗಳನ್ನು ಅಳವಡಿಸಲಾಗಿದೆ. ದಾನಿಗಳ ನೆರವಿನಿಂದ ಉದ್ಯಾನವನ ನಿರ್ಮಿಸಲಾಗಿದೆ. ಕೆ.ಎಚ್. ರಾಜೇಂದ್ರ ಶೇರೆಗಾರ್ ಬುದ್ಧನ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಜಿಮ್ ಸೌಲಭ್ಯವೂ ಇಲ್ಲಿ ದೊರೆಯಲಿದೆ ಎಂದರು.
ಸುರೇಂದ್ರ ಕಾಂಚನ್ ನಿರ್ವಹಿಸಿದರು. ಕಾರ್ತಿಕ್ ಕೋಡಿ ಸ್ವಾಗತಿಸಿದರು.