ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಸಮೀಪದ ಕೋಣಿಯಲ್ಲಿರುವ ಮಾನಸ ಜ್ಯೋತಿ ವಿಶೇಷ ಶಾಲೆ ಒಂದು ವರ್ಷ ಹತ್ತು ತಿಂಗಳ ನಂತರ ಮರುಪ್ರಾರಂಭಗೊಂಡಿದ್ದು ಸಂದರ್ಭದಲ್ಲಿ ವಿಶೇಷಚೇತನ ಸಾಧಕಿ ಮಾಳವಿಕ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಮಾದರಿಯಾದರು.
ವಿಶೇಷ ಚೇತನ ಮಗುವಾಗಿದ್ದ ಮಾಳವಿಕ ನಿರಂತರ ಪರಿಶ್ರಮ ಸಾಧನೆಯ ಮೂಲಕ ವಿಶೇಷವಾಗಿ ಪದವಿ ಪಡೆದು, ಕೋಟಕ್ ಇದರಲ್ಲಿ ಮೂರು ಬಾರಿ ಎಮ್.ಡಿ.ಆರ್.ಟಿ. ಆಗಿ ಹೊರಹೊಮ್ಮಿದ್ದಾರೆ. ವಿಶೇಷಚೇತನರಲ್ಲಿಯೂ ವಿಶೇಷವಾದ ಸಾಮಾಥ್ರ್ಯ,ಪ್ರತಿಭೆ ಇರುತ್ತದೆ ಎನ್ನುವುದಕ್ಕೆ ಮಾಳವಿಕಾ ಸಾಕ್ಷಿಯಾಗಿದ್ದಾರೆ.
ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ ವಿಶೇಷ ಮಕ್ಕಳಿಗೆ ಪ್ರತ್ಯೇಕವಾದ ನಿಯಮವನ್ನು ಸರಕಾರ ರಚನೆ ಮಾಡಬೇಕು. ಅವರ ಪ್ರತಿಭೆಯನ್ನು ವಿಶೇಷವಾಗಿ ಗುರುತಿಸಬೇಕು ಎಂದು ಹೇಳಿದರು. ಪೋಷಕರ ಒಂದು ತಪಸ್ಸಿನ ಫಲವಾಗಿ ಮಾಳವಿಕ ಬೆಳೆಯಲು ಸಾಧ್ಯ. ಎಲ್ಲಾ ಪೋಷಕರಿಗೆ ಇವರ ತಂದೆ ತಾಯಿ ಆದರ್ಶ, ಮಾರ್ಗದರ್ಶಿ. ಸರಕಾರ ವಿಶೇಷ ಮಕ್ಕಳಿಗೆ ಆಧ್ಯತೆ ಕೊಡದಿರುವುದು ಬೇಸರದ ಸಂಗತಿ ಎಂದರು.
ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಡಾ.ಬಿ.ವಿ.ಉಡುಪ ವಿಶೇಷ ಮಗು ಮಾಳವಿಕ ಇವರ ಸಾಧನೆ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿಶೇಷ ಮಗು ಮಾಳವಿಕ ಇವರನ್ನು ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲಾ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಳವಿಕ ಇವರ ಪೆÇೀಷಕರಾದ ಎಮ್.ಎಸ್. ಎನ್. ಸೌಮ್ಯಾಜಿ ಹಾಗೂ ಪ್ರೇಮ, ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಟ್ರಸ್ಟಿಗಳು, ಶಾಲಾ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಮಾನಸ ಜ್ಯೋತಿ ವಿಶೇಷ ಶಾಲೆಯ ಟ್ರಸ್ಟಿ ಕೆ.ಕೆ.ಕಾಂಚನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.