ಕುಂದಾಪುರ ಮಿರರ್ ಸುದ್ದಿ…
ಕೋಟ: ಬದುಕಿನಲ್ಲಿ ಆರೋಗ್ಯ ಉತ್ತಮವಾಗಿದ್ದರೆ ಎಲ್ಲವೂ ಇದ್ದಂತೆ, ಆರೋಗ್ಯದ ಬಗ್ಗೆ ಜಾಗೃತವಾಗಿದ್ದು, ಆಗಾಗ ಆರೋಗ್ಯ ತಪಾಸಣೆ ಮಾಡುತ್ತಾ ಸುಂದರ ಆರೋಗ್ಯ ಜೀವನ ನಡೆಸಬೇಕು, ಸಾಬ್ರಕಟ್ಟೆ ರೋಟರಿ ಕ್ಲಬ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿಯಾಗಿ ಆಯೋಜಿಸಿದ ಇಂತಹ ಆರೋಗ್ಯ ತಪಾಸಣ ಶಿಬಿರ ಅರ್ಥಪೂರ್ಣವಾಗಿದ್ದು ಸಾರ್ವಜನಿಕರಿಗೆ ಸಹಕರಿಯಾಗಿದೆ ಎಂದು ರೋಟರಿ ವಲಯ 3ರ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಅವರು ಹೇಳಿದರು.
ಅವರು ರೋಟರಿ ಕ್ಲಬ್ ಸಾೈಬ್ರಕಟ್ಟೆ ಸಾರಥ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ರೋಟರಿ ಸಮುದಾಯ ದಳ ಸಾೈಬ್ರಕಟ್ಟೆ, ದಂತ ಮೇಡಿಕಲ್ ಕಾಲೇಜು ಮಣಿಪಾಲ, ರೋಟರಿ ಸಮುದಾಯ ದಳ ಶಿರಿಯಾರ, ರೋಟರ್ಯಾಕ್ಟ್ ಕ್ಲಬ್ ಮಾನ್ಯ, ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ನುರಿತ ವೈದ್ಯರಿಂದ ಉಚಿತ ದಂತ ಚಿಕಿತ್ಸೆ ಹಾಗೂ ಚರ್ಮರೋಗ ತಪಾಸಣಾ ಶಿಬಿರವನ್ನು ಸಾೈಬ್ರಕಟ್ಟೆಯ ಸ್ವಾಗತ್ ಮಿನಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಸ್ತೂರ್ಬಾ ಆಸ್ಪತ್ರೆಯ ಚರ್ಮ ತಪಾಸಣೆಯ ವೈದ್ಯ ಡಾ. ವಿನಯ್ ಅಂಚನ್ ಮಾತನಾಡಿ ಕಾಲ ಕಾಲಕ್ಕೆ ಸೂಕ್ತ ವೈದ್ಯಕೀಯ ತಪಾಸಣೆಯಿಂದ ಉತ್ತಮ ಆರೋಗ್ಯದಿಂದ ಇರಬಹುದು, ಕಾಯಿಲೆ ಬರುವ ಮುಂಚೆ ಜಾಗೃತರಾಗಿ ಇರುವುದು ಅವಶ್ಯಕ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾೈಬ್ರಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಯು ಪ್ರಸಾದ್ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಮಣಿಪಾಲ ದಂತ ಕಾಲೇಜ್ ವೈದ್ಯ ಡಾ. ಜೀವನ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ , ರೋಟರಿ ವಲಯ ಸೇನಾನಿ ವಿಜಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್ , ಸಾೈಬ್ರಕಟ್ಟೆ ರೋಟರಿ ಸಮುದಾಯದಳದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಿರಿಯಾರದ ಶ್ರೀ ಶರತ್ ಕೆ, ರೋಟರ್ಯಾಕ್ಟ್ ಕ್ಲಬ್‍ನ ಕಾರ್ಯದರ್ಶಿ ದ್ರುವಿನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಥಾಮಸ್ ನಿರೂಪಿಸಿದರು.