ಕುಂದಾಪುರ ಮಿರರ್ ಸುದ್ದಿ…
ಬೈಂದೂರು:ಮರವಂತೆಯಲ್ಲಿ ನಡೆದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆಯ ವೇಳೆ ಎಸ್‍ಸಿಡಿಸಿಸಿ ಬ್ಯಾಂಕ್ ವಾಹನ ಚಾಲಕ ರಾಜೇಶ್ ಬೈಂದೂರು ಅವರಿಗೆ ರೂ.36350 ಸಿಕ್ಕಿದ್ದು, ಹಣವನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ರತ್ನಾಕರ ಪೂಜಾರಿ ಮರವಂತೆ ಎನ್ನುವವರ ಹಣ ಕಳೆದುಕೊಂಡಿದ್ದರು. ಅದು ರಾಜೇಶ್ ಅವರಿಗೆ ಸಿಕ್ಕಿದ್ದು, ಅವರು ಅದನ್ನು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜು ಪೂಜಾರಿಯವರ ಸಮಕ್ಷಮದಲ್ಲಿ ರತ್ನಾಕರ ಪೂಜಾರಿಯವರಿಗೆ ಹಣವನ್ನು ಮರಳಿಸಲಾಯಿತು.