ಕೋವಿಡ್ ಆರೈಕೆ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ

0
544

ಕುಂದಾಪುರ ಮಿರರ್ ಸುದ್ದಿ…
ಉಡುಪಿ:
ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದರಿಂದ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳಿಗೆ, ಆಸ್ಪತ್ರೆಯಲ್ಲಿ ಆಕ್ಸಿಜನ್‌ನ ಅವಶ್ಯಕತೆ ಇಲ್ಲದೇ ಹೋಂ ಐಸೋಲೇಷನ್ ಆಗಬೇಕಾದವರಿಗೆ, ಮನೆಯಲ್ಲಿ ಹೋಂ ಐಸೋಲೇಷನ್‌ಗೆ ಸಮಸ್ಯೆ ಇರುವವರಿಗೆ ಅಥವಾ ಇತರ ಕಾರಣದಿಂದಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಪ್ರಕರಣಗಳಲ್ಲಿ ಅನುಕೂಲವಾಗುವಂತೆ ತಾಲೂಕು ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

Click Here

ಕುಂದಾಪುರ ತಾಲೂಕಿನ ಹಳೇ ಆದರ್ಶ ಆಸ್ಪತ್ರೆ ಕೋವಿಡ್ ಆರೈಕೆ ಕೇಂದ್ರಕ್ಕೆ ಭೂದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ ಮೊ.ನಂ: 9844545668, ಕಾರ್ಕಳ ತಾಲೂಕಿನ ಮಿಯಾರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ನಿಲಯ ಹಾಗೂ ನಿಟ್ಟೆಯ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಆರೈಕೆ ಕೇಂದ್ರಗಳಿಗೆ ಅಕ್ಷರ ದಾಸೋಹ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ಟಿ ಮೊ.ನಂ: 9449494011, ಹೆಬ್ರಿ ತಾಲೂಕಿನ ಆರೋಗ್ಯ ಸಮುದಾಯ ಭವನದ ಆರೈಕೆ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಶೆಟ್ಟಿ ಮೊ.ನಂ: 9448847958 ಹಾಗೂ ಉಡುಪಿ ತಾಲೂಕಿನ ಮಣಿಪಾಲ ಎಂ.ಐ.ಟಿ ಹಾಸ್ಟೆಲ್‌ನ ಆರೈಕೆ ಕೇಂದ್ರöಕ್ಕೆ ಭೂದಾಖಲೆಗಳ ಸಹಾಯಕ ನಿರ್ದೇಶಕ ತಿಪ್ಪೇರಾಯ ಕರೆಪ್ಪ ತೊರವಿ ಮೊ.ನಂ: 8277040047 ನ್ನು ನೇಮಕ ಮಾಡಲಾಗಿದ್ದು, ನಿಯೋಜಿತ ಅಧಿಕಾರಿಗಳು ಕೋವಿಡ್ ಆರೈಕೆಗೆ ದಾಖಲಾಗುವವರ ದಿನಂಪ್ರತಿ ವಿವರಗಳನ್ನು ಜಿಲ್ಲಾ ಕೋವಿಡ್ ಆರೈಕೆ ಕೇಂದ್ರದ ನೋಡೆಲ್ ಅಧಿಕಾರಿಯಾದ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಮೊ.ನಂ:9980530447, ಇ-ಮೇಲ್ pcmalpe@yahoo.com ಇವರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Click Here

LEAVE A REPLY

Please enter your comment!
Please enter your name here