ಮಣಿಪಾಲ್ ರೇಡಿಯೋ ಸಂಯೋಜನೆಯಲ್ಲಿ ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ಸಮುದಾಯ ಬಾನುಲಿ ಕಾರ್ಯಕ್ರಮ ಆಯೋಜನೆ.

0
312

ಕುಂದಾಪುರ ಮಿರರ್ ಸುದ್ದಿ…
ಕೋಟ:
ಸ್ವಚ್ಛ ಪರಿಸರದ ಬಗ್ಗೆ ಯುವ ಸಮುದಾಯ ಮುಂಚೂಣಿಗೆ ನಿಲ್ಲಬೇಕು ಆ ಮೂಲಕ ಸ್ವಚ್ಛಭಾರತ ಪರಿಕಲ್ಪನೆಗೆ ಬಣ್ಣ ಬಡಿಯುವ ಕೆಲಸ ಯುವ ಸಮೂಹ ಮಾಡಬೇಕು ಎಂದು ಯುವ ಸ್ವಚ್ಛಾಗ್ರಹಿ ಮತ್ತು ಪತ್ರಕರ್ತ ರವೀಂದ್ರ ಕೋಟ ಹೇಳಿದ್ದಾರೆ.

ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಣಿಪಾಲ್ ರೇಡಿಯೋ ಸಂಯೋಜನೆಯಲ್ಲಿ
ಕರ್ನಾಟಕ ಸರಕಾದರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಪ್ರಾಯೋಜನೆಯಲ್ಲಿ ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಜ. 12 ರಂದು ಬುಧವಾರ ರಾಷ್ಟ್ರೀಯ ಯುವದಿನ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಯುವಕರ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ಹಾಳುಗೆಡವ ಸ್ಥಿತಿಯ ಬಗ್ಗೆ ವಿವರಿಸಿ ಆಯಾ ಭಾಗಗಳ ರಾಷ್ಟ್ರೀಯ ಹೆದ್ದಾರಿ ,ಒಳ ರಸ್ತೆಗಳಲ್ಲಿ ಅನಾಗರಿಕರು ಎಸೆಯುತ್ತಿರುವ ತ್ಯಾಜ್ಯದ ಕೊಂಪೆಗಳ ಬಗ್ಗೆ ವಿವರಿಸಿ ಈ ಬಗ್ಗೆ ಯುವ ಸಮುದಾಯ ಮನೆಮನೆಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯತೆಯನ್ನು ಮನಗಾಣಿಸಿದರು.

ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕಾಗುವ ಕಷ್ಟ ನಷ್ಟಗಳ ಬಗ್ಗೆ ಉಲ್ಲೇಖಿ ಇತ್ತೀಚಿನ ಕೆಲ ವರ್ಷಗಳಿಂದ ಪ್ರಾಕೃತಿಕ ಸಮಸ್ಯೆಗಳಿಗೆ ಮನುಕುಲವೇ ಹೊಣೆಗಾರರಾಗುತ್ತಿದ್ದೇವೆ.ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಸೃಷ್ಠಿಸುವ ಸುಲಭ ವಿಧಾನಗಳಿಂದ ಅವನತಿಯ ಅಂಚಿಗೆ ತಲುಪುತ್ತಿರು ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.ನಮ್ಮ ಪರಿಸರವನ್ನು ಹಸಿರಾಗಿಸುವ ಜೊತೆಗೆ ಸುಂದರ ಪರಿಸರ ನಮ್ಮದಾಗಿಸಲು ಏನೆನು ಕ್ರಮಗಳನ್ನು ಕೈಗೊಳ್ಳಬಹುದು ಎಂಬುವುದರ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು.

ಸಂವಾದಕ್ಕಿಳಿದ ವಿದ್ಯಾರ್ಥಿಗಳು
ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಗೈದು ಕೋಟದ ಪಂಚವರ್ಣ ಯುವಕ ಮಂಡಳ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಿರಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಂದು ಲೋಪ ಕಾಣಿಸುತ್ತಿದೆ ಅದೆನೆಂದರೆ ನೀವು ಪ್ರತಿ ಭಾನುವಾರ ಆಯಾ ಭಾಗಗಳನ್ನು ಶುಚಿಗೊಳಿಸುತ್ತೀರಿ ಆದರೆ ಪುನಹ ಅದೇ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆಯುತ್ತಾರೆ ಹಾಗಾದರೆ ನಿಮ್ಮ ಸ್ವಚ್ಛತಾ ಅಭಿಯಾನಕ್ಕೆ ಎಲ್ಲಿ ಬೆಲೆ ಬರುತ್ತದೆ ಎಂದು ಪ್ರಶ್ನಿಸಿದರು ಇದಕ್ಕೆ ಉಲ್ಲೇಖಿಸಿ ಉತ್ತರಿಸಿದರ ರವೀಂದ್ರ ಕೋಟ ಎಲ್ಲಿಯವರಗೆ ಎಸೆಯುವ ಕೈ ಅಂತ್ಯಗೊಳ್ಳುದಿಲ್ಲವೋ ಅಲ್ಲಿಯವರೆಗೆ ಕಸ ತೆಗೆಯುವ ಕೈ ಸೋಲುವುದಿಲ್ಲ ಎಂಬ ಧ್ಯೇಯೋದ್ದೇಶದಿಂದ ಈ ಕಾರ್ಯದಲ್ಲಿ ನಿರತರಾಗಿದ್ದೇವೆ ಮುಂದೆ ಕೂಡಾ ನಿರಂತರವಾಗಿ ಕಾರ್ಯೋನ್ಮುಖವಾಗುತ್ತಾ ಇರುತ್ತೇವೆ ಎಂದರು.

Click Here

Click Here

ಮತ್ತೆ ವಿದ್ಯಾರ್ಥಿಗಳು ಪ್ರಶ್ನಿಸುತ್ತಾ ಸ್ಥಳೀಯಾಡಳಿತಗಳು ಆಯಾ ಪ್ರದೇಶಗಳಲ್ಲಿ ಕಾಂಕ್ರೇಟ್ ರಿಂಗ್ ಅವಳವಡಿಸಿದರೆ ಒಳಿತಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದರ ಕೋಟ ರಿಂಗ್ ಅಳವಡಿಸುವುದು ದೊಡ್ಡ ಕೆಲಸವಲ್ಲ ಅದರ ನಿರ್ವಹಣೆ ಕೂಡಾ ಅಷ್ಟೆ ಸಮರ್ಪಕವಾಗಿ ನಡೆಯಬೇಕು ಇತ್ತೀಚಿಗಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಿಂಗ ಅಳವಡಿಸಿ ಅಲ್ಲಿ ಸತ್ತ ಪ್ರಾಣಿ,ಹಾಗೂ ಕೋಳಿತ್ಯಾಜ್ಯಗಳನ್ನು ಹಾಕಲಾಗಿದೆ ಅಲ್ಲದೆ ಬೇರೆ ಬೇರೆ ತ್ಯಾಜ್ಯಗಳು ಅದರಲ್ಲಿ ಕೊಂಪೆಯಾಗಿಸುವುದು ನಾವುಗಳು ಪ್ರತ್ಯಕ್ಷವಾಗಿ ಕಂಡುಕೊಂಡ ಸತ್ಯ ಈ ರೀತಿಯ ಬದಲು ಇತ್ತೀಚಿಗಿನ ದಿನಗಳಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಆಯಾ ಪಂಚಾಯತ್ ಗಳು ಎಸ್ ಎಲ್ ಆರ್ ಎಮ್ ಘಟಕಗಳ ಮೂಲಕ ಒಳ ಕಸ ವಿಲೇವಾರಿ ಮಾಲಾಗುತ್ತಿದೆ ಇದರಿಂದ ಸಮಸ್ಯೆ ಬಗೆಹರಿವ ಲಕ್ಷಣಗಳು ಗೊಚರಿಸುತ್ತಿದೆ ಎಂದು ಉತ್ತರಿಸಿದರು. ಇದೇ ರೀತಿ ಸಾಕಷ್ಟು ಪ್ರರ್ಸನೆಗಳಿಗೆ ರವೀಂದ್ರ ಕೋಟ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ವಹಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ಎಂ ವೈದ್ಯ, ಎನ್‍ಎಸ್‍ಎಸ್ ಘಟಕ ಒಂದರ ಡಾ.ಮುರುಳಿ ಎನ್,ಘಟಕ ಎರಡರ ಅನಂತ್ ಕುಮಾರ್ ಸಿ ಎಸ್.ಇತಿಹಾಸ ವಿಭಾಗದ ಉಪನ್ಯಾಸ ರಾಜಣ್ಣ,ಪ್ರಶಾಂತ್ ನಿಲಾವರ, ವಿದ್ಯಾರ್ಥಿಗಳಾದ ಆದರ್ಶ,ಸುಮಂತ್,ಸಂಗೀತ,ಶ್ರದ್ಧಾ,ರಕ್ಷಾ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮಣಿಪಾಲ್ ರೇಡಿಯೋ ಸಂಯೋಜಕಿ ರಶ್ಮಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here