ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಬಿಡಾಡಿ ಗೋವುಗಳ ಹಾವಳಿ ಅತಿಯಾದ ಹಿನ್ನಲ್ಲೆಯಲ್ಲಿ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ನಿರ್ದೇಶನದಂತೆ ಗುರುವಾರ ಸಾಲಿಗ್ರಾಮ ಸುತ್ತಮುತ್ತಲಿನ ಪರಿಸರದಲ್ಲಿ ಅಡ್ಡಾಡಿಕೊಂಡಿರುವ ಗೋವುಗಳನ್ನು ನಿಲಾವರದ ಗೋ ಶಾಲೆಗೆ ಕೊಂಡ್ಯೊಯುವ ಮೂಲಕ ಕಡಿವಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಬಹು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದ ರೈತರು, ವಾಹನ ಸವಾರರು ನಿಟ್ಟುಸಿರು ಬಿಡುವಂತ್ತಾಗಿದೆ. ಅಲ್ಲದೆ ರಸ್ತೆಯಲ್ಲಿ ಅಪಘಾತದಿಂದ ಗೋವುಗಳಿಗೆ ಮುಕ್ತಿ ದೊರಕಿದಂತ್ತಾಗಿದೆ.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ,ಉಪಾಧ್ಯಕ್ಷೆ ಅನುಸೂಯ ಹೇರ್ಳೆ,ಸದಸ್ಯರಾದ ಸಂಜೀವ ದೇವಾಡಿಗ,ರತ್ನನಾಗರಾಜ್ ಗಾಣಿಗ,ಮುಖ್ಯಾಧಿಕಾರಿ ಶಿವ ನಾಯ್ಕ್,ಆರೋಗ್ಯ ನಿರೀಕ್ಷಕಿ ಮಮತಾ,ಪೌರಕಾರ್ಮಿಕರು ಉಪಸ್ಥಿತರಿದ್ದರು.