ಕೋಟೇಶ್ವರ: ಕೋಟಿಲಿಂಗೇಶ್ವರ ದೇವಳದ ಧ್ವಜಸ್ತಂಭ ತೆರವು

0
485

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪುರಾಣ ಪ್ರಸಿದ್ಧ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನಾ ಪೂರ್ವ ಪ್ರಕ್ರಿಯೆಗಳು ಈಗಾಗಲೇ ನಡೆಸಲಾಗಿದ್ದು ವಿಸರ್ಜಿಸಿದ ಹಳೆ ಧ್ವಜಮರವನ್ನು ಶುಕ್ರವಾರ ಸ್ಥಾನಪಲ್ಲಟ್ಟಗೊಳಿಸಿ ತೆರವುಗೊಳಿಸಲಾಯಿತು.

1955ರಲ್ಲಿ ಪ್ರತಿಷ್ಠಾಪಿಸಲಾಗಿದ್ದ ಧ್ವಜಸ್ತಂಭವನ್ನು ಖ್ಯಾತ ವಾಸ್ತುತಜ್ಞ ಮಹೇಶ್ ಮುನಿಯಂಗಳ ಇವರ ಮಾರ್ಗದರ್ಶನದಲ್ಲಿ ರಥ ಶಿಲ್ಪಿ ರಾಜಗೋಪಾಲ ಆಚಾರ್ ಇವರ ನೇತೃತ್ವದಲ್ಲಿ ಸತತ 2 ಗಂಟೆಗಳ ಕಾಲ ಕ್ರೇನ್ ಮೂಲಕ ಸುಮಾರು 72 ಅಡಿ ಎತ್ತರದ ಧ್ವಜಸ್ತಂಭವನ್ನು ಅತಿ ನಾಜೂಕಾಗಿ ತೆರವುಗೊಳಿಸಲಾದೆ.

Click Here

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಳದ ಆಡಳಿತ ಧರ್ಮದರ್ಶಿ ಶ್ರೀಧರ ಕಾಮತ್, ಕಂದಾಯ ಇಲಾಖೆ ಅಧಿಕಾರಿ ಆನಂದ, ಸಮಾಜ ಸೇವಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಭಾಕರ್ ಬಿ ಕುಂಭಾಸಿ, ಗಣೇಶ್ ಭಟ್ ಗೋಪಾಡಿ, ಎಲ್ಲಾ ಸಮಿತಿ ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.


ದೇವಳದ ಮುಂಭಾಗದಲ್ಲಿ 1955ನೇ ಇಸವಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಧ್ವಜಸ್ತಂಭದ ಕೆಳಭಾಗದಲ್ಲಿ ಇರಿಸಲಾಗಿದ್ದ ನಾಣ್ಯದ ಪಾತ್ರೆಯಲ್ಲಿ ಹಳೆಕಾಲದ ನಾಣ್ಯಗಳು ಪತ್ತೆಯಾಗಿವೆ. ಮುಂದಿನ ನೂತನ ಧ್ವಜಸ್ತಂಭ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಈ ನಾಣ್ಯಗಳನ್ನು ಸೇರಿದಂತೆ ಪ್ರಸ್ತುತ ಕಾಲದ ದ್ರವ್ಯಗಳನ್ನು ಹಾಕಿ ಧ್ವಜಮರ ಪ್ರತಿಷ್ಠೆ ನಡೆಸಲಾಗುತ್ತದೆ.

Click Here

LEAVE A REPLY

Please enter your comment!
Please enter your name here