ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಸಾಸ್ತಾನ ಮಹಿಳಾ ಮಂಡಲದ ಕಾರ್ಯಾಲಯಕ್ಕೆ ಅವಶ್ಯವಿರುವ ಕುರ್ಚಿ ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷೆ ಯಶೋದ ಸಿ ಹೊಳ್ಳ ವಹಿಸಿದ್ದರು. ರೋಟರಿ ಹಿರಿಯ ಸದಸ್ಯರಾದ ಆನಂದರಾಮ ತುಂಗ, ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರ ಸುಧಾಕರ್ ಅವರಿಗೆ ಹಸ್ತಾಂತರಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ರೋಟರಿ ಕ್ಲಬ್ ಕೊಡುಗೆಗೆ ಕೃತಜ್ಞತೆಗಳನ್ನು ತಿಳಿಸಿದರು. ರೋಟರಿ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಗೈದರು. ಈ ಸಂದರ್ಭದಲ್ಲಿ ರೋಟರಿ ಸದಸ್ಯರು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.