ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಬೈಂದೂರಿನ ಯಡ್ತರೆ ನಾಕಟ್ಟೆಯ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಬಿಂಬ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ-ಗೆಂಡಸೇವೆ-ಪಂಜುರ್ಲಿ ನೇಮೋತ್ಸವ, ಶ್ರೀ ಬ್ರಹ್ಮಬೈದರ್ಕಳ ಜಾತ್ರಾಮಹೋತ್ಸವ, ಮಹಾಅನ್ನಸಂತರ್ಪಣೆ ಜ.23 ಮತ್ತು 24ರಂದು ನಡೆಯಿತು,
ಜ.23ರಂದು ಬೆಳಿಗ್ಗೆ 7ರಿಂದ ದೇವನಾಂದಿ, ಮಹಾಸಂಕಲ್ಪ, ಜೀವಕಲಶ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಸಪರಿವಾರ ಶ್ರೀ ಬ್ರಹ್ಮಬೈದರ್ಕಳ ಪುನಃ ಪ್ರತಿಷ್ಠೆ, ಕಲಾತತ್ವ ಹೋಮ ರಾತ್ರಿ 7.50ಕ್ಕೆ ಜೀವಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ 12-30ಕ್ಕೆ ಮಹಾಅನ್ನಸಂತರ್ಪಣೆ ನಡೆಯಿತು. ನೂತನ ವಾಗಿ ನಿರ್ಮಿಸಲಾದ ಸ್ವಾಗತಗೋಪುರದ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಯಿತು. ಶಾಸಕ ಬಿ,ಎಂ ಸುಕುಮಾರ ಶೆಟ್ಟಿ ಸ್ವಾಗತಗೋಪುರ ಉದ್ಘಾಟಿಸಿದರು. ಸಂಜೆ 7ರಿಂದ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ‘ಕೋಟಿ ಚೆನ್ನಯ್ಯ’ ಪ್ರದರ್ಶನಗೊಂಡಿತು.
ಜ.24ರಂದು ಬೆಳಿಗ್ಗೆ 9-56ರಿಂದ 10-40ರ ಒಳಗೆ ಮೀನ ಲಗ್ನದಲ್ಲಿ ಬ್ರಹ್ಮಕುಂಭಾಬಿಷೇಕ, 11 ಗಂಟೆಗೆ ಪಲ್ಲ ಪೂಜೆ, ಶ್ರೀ ಬ್ರಹ್ಮಬೈದರ್ಕಳ ದರ್ಶನ, ಮಹಾಪ್ರಸಾದ ವಿತರಣೆ, ಮಧ್ಯಾಹ್ನ 12-30ಕ್ಕೆ ಮಹಾಅನ್ನಸಂತರ್ಪಣೆ, ಸಂಜೆ 5-30ರಿಂದ 8-30ರ ತನಕ ಅಗೇಲು ಸೇವೆ, ಬ್ರಹ್ಮಬೈದರ್ಕಳ ಸಂದರ್ಶನದ ಹಾಲಾವಳೀ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಯಿಂದ ಪಂಜುರ್ಲಿ ದೈವದ ವೈಭವದ ಕೋಲಸೇವೆ, ಗೆಂಡಸೇವೆ ನಡೆಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಗೋಪಾಲ ಪೂಜಾರಿ, ಆಡಳಿತ ಮಂಡಳಿ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಗೌರವಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ವೆಂಕ್ಟ ಪೂಜಾರಿ ಸಸಿಹಿತ್ಲು, ಮಂಜುನಾಥ ಪೂಜಾರಿ ಮೇಲ್‍ಹಿತ್ಲು ಗgಡಿಮನೆ, ಪ್ರಧಾನ ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ಹಾಗೂ ಜೀರ್ಣೋದ್ದಾರ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಣೇಶ ಎಲ್ ಪೂಜಾರಿ, ಕಾರ್ಯಾಧ್ಯಕ್ಷ ರಾಜು ಎಸ್ ಮಯ್ಯಾಡಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿಲ್ಲವ, ಪ್ರಕಾಶ ಮಾಕೋಡಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ಬಿಲ್ಲವ ಶಿರೂರು, ಗೋವಿಂದ ಬಾಬು ಪೂಜಾರಿ, ಅಧ್ಯಕ್ಷ ನಾಗರಾಜ ಶೆಟ್ಟಿ ನಾಕಟ್ಟೆ, ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ನಾಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.