ಸಹಕಾರ ಸಂಘಗಳ ನೌಕರರು ಹಾಗೂ ಸದಸ್ಯರಿಂದ ಬೃಹತ್ ರಕ್ತದಾನ ಶಿಬಿರ

0
663

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ರಕ್ತದಾನ ಒಂದು ಪುಣ್ಯದ ಕಾರ್‍ಯ. ಮಾತ್ರವಲ್ಲದೆ ಇದೊಂದು ಹೃದಯ ಶ್ರೀಮಂತಿಕೆಯ ಕಾರ್‍ಯ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸಹಕಾರಿ ಸಂಘಗಳು ಈ ರೀತಿಯ ಸಮಾಜಮುಖಿ ಚಿಂತನೆಯನ್ನು ಅಳವಡಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್‍ಯ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

Click Here


ಅವರು ಬುಧವಾರ ಕುಂದಾಪುರದ ಜೂನಿಯರ್ ಕಾಲೇಜಿನ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಕುಂದಾಪುರ ರೆಡ್‌ಕ್ರಾಸ್‌ನ ರಕ್ತನಿಧಿ ಕೇಂದ್ರ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಉಡುಪಿ ಹಾಗೂ ಕುಂದಾಪುರ ಮತ್ತು ಬೈಂದೂರು ತಾಲೂಕಿನ ವಿವಿಧ ಸಹಕಾರಿ ಸಂಘಗಳ ನೇತೃತ್ವದಲ್ಲಿ ಆಯೋಜಿಸಿದ ಸಹಕಾರ ಸಂಘಗಳ ನೌಕರರು ಹಾಗೂ ಸದಸ್ಯರಿಂದ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

೫೩ ನೇ ಬಾರಿಗೆ ರಕ್ತದಾನ ಮಾಡಿದ ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷ ಡಾ| ಸಚ್ಚಿದಾನಂದ ವೈದ್ಯ ಅವರು ಉದ್ಘಾಟಿಸಿದರು.

ರೆಡ್‌ಕ್ರಾಸ್ ಕುಂದಾಪುರದ ಚೇರಮನ್ ಎಸ್. ಜಯಕರ ಶೆಟ್ಟಿ ಮಾತನಾಡಿ, ಜಗತ್ತಿನಲ್ಲಿ ರಕ್ತದಾನಕ್ಕಿಂತ ಉತ್ತಮವಾದ ಕೆಲಸ ಮತ್ತೊಂದಿಲ್ಲ. ಈ ಸಹಕಾರಿ ಸಂಘಗಳ ರಕ್ತದಾನ ಶಿಬಿರವನು ರಾಜ್ಯಕ್ಕೆ ಮಾದರಿ ಎಂದರು.

ಇಂದಿನ ಸಹಕಾರಿ ಸಂಘಗಳ ರಕ್ತದಾನ ಶಿಬಿರವನು ವಿಶಿಷ್ಟ ಹಾಗೂ ಮಾದರಿಯಾದ ಕಾರ್‍ಯಕ್ರಮ. ಇದೇ ರೀತಿ ಮುಂದಿನ ದಿನಗಳಲ್ಲಿ ಸಹಕಾರಿ ಸಂಘಗಳ ನೌಕರರಿಗೆ ಇನ್ನಷ್ಟು ಉತ್ತಮವಾದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುವಂತಾಗಲಿ. ಇದಕ್ಕೆ ಡಿಸಿಸಿ ಬ್ಯಾಂಕ್ ಸಹಕಾರ ಸದಾ ಇರುತ್ತದೆ ಎಂದು ದ.ಕ. ಜಿಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.

ಉಡುಪಿ ಜಿಲ್ಲಾ ಸಹಕಾರಿ ಇಲಾಖೆಯ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿದರು.
ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ೧೩೦ಕ್ಕೂ ಅಧಿಕ ಮಂದಿ ಸಹಕಾರಿ ಬಂಧುಗಳು ರಕ್ತದಾನ ಮಾಡಿದರು.
ಸಹಕಾರಿ ಇಲಾಖೆಯ ಕುಂದಾಪುರದ ಸಹಾಯಕ ಉಪ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಪ್ರಾಸ್ತವಿಕವಾಗಿ ಮಾತನಾಡಿದರು. ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ಕೀರ್ತಿ ಕುಮಾರ್ ಬೆಳ್ವೆ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್‍ಯಕ್ರಮ ನಿರೂಪಿಸಿದರು.

ಮೂವರಿಂದ ದೇಹದಾನ ನೋಂದಣಿ
ಸಪ್ತಸ್ವರ ವಿವಿದ್ದೋದ್ದೇಶ ಸಹಕಾರಿ ಸಂಘಗಳ ಸದಸ್ಯರಾದ ಸೀತರಾಮ ದೇವಾಡಿಗ, ಪತ್ನಿ ಲಲಿತಾ ಹಾಗೂ ಗೋಪಾಲ ಪೂಜಾರಿ ಅವರು ಈ ಸಂದರ್ಭದಲ್ಲಿ ತಮ್ಮ ಕಾಲ ನಂತರ ದೇಹದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here