ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಎಲ್ಲ ಸೇವೆ ಲಭ್ಯ – ಮುರಳಿಧರ್ ಕೆ ಶೆಟ್ಟಿ

0
657

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಎಲ್ಲಾ ಯೋಜನೆಗಳನ್ನು ಅನುಷ್ಟಾನಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ನೂತನ ಕಾರ್ಯಕ್ರಮವಾದ ಸಾಮಾನ್ಯ ಸೇವಾ ಕೇಂದ್ರ(C.S.C)ವನ್ನು ಅಸೋಡು ಬಂಡ್ಸಾಲೆಯಲ್ಲಿ ಮುರಳಿಧರ್ ಕೆ ಶೆಟ್ಟಿ ಉದ್ಘಾಟಿಸಿದರು.

ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈಗಾಗಲೇ ಗ್ರಾಹಕ ಸೇವಾ ಕೇಂದ್ರಗಳನ್ನು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ತೆರೆದಿದ್ದು ಹೆಚ್ಚುವರಿಯಾಗಿ ಈ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕುಂದಾಪುರ ತಾಲ್ಲೂಕಿನಲ್ಲಿ 43 ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಈ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಲಿ ಕಾರ್ಮಿಕರಿಗೆ ನೆರವು ನೀಡುವ ಈ ಶ್ರಮ ಕಾರ್ಡನ್ನು ಉಚಿತವಾಗಿ ಈಗ ಪ್ರಾರಂಭಿಸಿದ್ದೇವೆ. ಮುಂದಕ್ಕೆ ಹಂತಹಂತವಾಗಿ 700ಕ್ಕೂ ಹೆಚ್ಚು ಸೇವೆಗಳನ್ನು ಜನರಿಗೆ ಸರಿಯಾದ ಮಾಹಿತಿ ಮಾರ್ಗದರ್ಶನ ತರಬೇತಿಗಳ ಮೂಲಕ ಎಲ್ಲ ಪ್ರಯೋಜನಗಳನ್ನು ಪಡೆಯುವಂತೆ ಪ್ರೇರೇಪಿಸಿ ಪ್ರಯೋಜನ ಪಡೆಯುವಂತೆ ಈ ಕಾಮನ್ ಸರ್ವಿಸ್ ಸೆಂಟರ್ ನಿಂದ ಮಾಡಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ತಾಲ್ಲೂಕಿನ ಹಿರಿಯ ಯೋಜನಾಧಿಕಾರಿ ಮುರಳೀಧರ್ ಕೆ ಶೆಟ್ಟಿಯವರು ಅಸೋಡು ಬಂಡ್ಸಾಲೆಯ ಸುಜಿತ್ ಕುಮಾರ್ ಶೆಟ್ಟಿಯವರ ಕಟ್ಟಡದಲ್ಲಿ ನೂತನವಾಗಿ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ನಂತರ ನೂತನ ಕಾಳಾವರ ವಲಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಕಾಳಾವರ ಗ್ರಾಪಂ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಶೆಟ್ಟಿ ಯವರು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಎಲ್ಲಾ ಕಾರ್ಯಕ್ರಮಗಳು ಶ್ಲಾಘನೀಯ. ಈ ನೂತನ ವಲಯದಿಂದ ಎಲ್ಲಾ ಸದಸ್ಯರು ಉತ್ತಮ ಪ್ರಯೋಜನ ಪಡೆಯುವಂತಾಗಲಿ ಹಾಗೆಯೇ ಗ್ರಾಮ ಪಂಚಾಯಿತಿಗೆ ಬರುವ ಸದಸ್ಯರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಡು ಬಂಡ್ಸಾಲೆಯ ಜಾಗದ ಮಾಲೀಕರಾದ ಸುಜಿತ್ ಕುಮಾರ್ ಶೆಟ್ಟಿ ಅವರು ವಹಿಸಿದ್ದರು.

Click Here

ಕಾರ್ಯಕ್ರಮದಲ್ಲಿ ಕಾಳವರ ಗ್ರಾಮ ಪಂಚಾಯ್ತಿ ಸದಸ್ಯರಾದ ರಘುರಾಮ್ ಶೆಟ್ಟಿ, ಚಂದ್ರ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ಕಾಳಾವರ ಒಕ್ಕೂಟಗಳ ಅಧ್ಯಕ್ಷರಾದ ಚಂದ್ರ ಆಚಾರ್, ಶಂಕರ್, ಕಚೇರಿಯ ಪ್ರಬಂಧಕರಾದ ನವೀನ್, ವಲಯ ಮೇಲ್ವಿಚಾರಕರಾದ ದೀಪಕ್, ಕಚೇರಿ ಸಹಾಯಕಿ ಚೈತನ್ಯ ,ರೂಪ, ಸೇವಾ ಪ್ರತಿನಿಧಿಗಳಾದ ಶೇಖರ್ ದೇವಾಡಿಗ, ಸಾವಿತ್ರಿ, ಲಲಿತ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ತಾಲ್ಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ನಿರ್ವಹಿಸಿ, ವಲಯ ಮೇಲ್ವೀಚಾರಕರಾದ ದೀಪಕ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಶೇಖರ್ ದೇವಾಡಿಗ ವಂದಿಸಿದರು.

LEAVE A REPLY

Please enter your comment!
Please enter your name here