ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಪ್ರಾಯೋಜಕತ್ವದಲ್ಲಿ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ ಬಸ್ಸ್ ಪ್ರಯಾಣಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಗವರ್ನರ್ ಎಮ್ .ಜಿ ರಾಮಚಂದ್ರ ಮೂರ್ತಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ಮಹೇಂದ್ರ ಶೆಟ್ಟಿ, ವಲಯ 1ರ ಸಹಾಯಕ ಗವರ್ನರ್ ಜೆ.ಪಿ. ಶೆಟ್ಟಿ ಕಾರ್ಯದರ್ಶಿ ಸುಹಾಸ್ ಭಂಡರ್‍ಕಾರ್, ರೋಟರಿ ಸದಸ್ಯರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ನಾಯಕ್, ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಹಾಗೂ ಪಂಚಾಯತ್ ಸದಸ್ಯೆ ಜೂಡಿತ್ ಮೆಂಡೊನ್ಸಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.