ಕುಂದಾಪುರ ಮಿರರ್ ಸುದ್ದಿ…
ಕೋಟ: ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇದರ ನೂತನ ಅಧ್ಯಕ್ಷರಾಗಿ ರಾಧಕೃಷ್ಣ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಅಘೋರೇಶ್ವರ ದೇವಳದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ 2022-23ನೇ ಸಾಲಿಗೆ ನೂತನ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಗಿದ್ದು ಅದರಂತೆ ನೂತನ ಕಾರ್ಯದರ್ಶಿಯಾಗಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ,ಉಪಾಧ್ಯಕ್ಷರಾಗಿ ಶ್ಯಾಮಸುಂದರ ನಾಯರಿ, ಜೊತೆ ಕಾರ್ಯದರ್ಶಿ ಮಂಜುನಾಥ ನಾಯರಿ, ಕೋಶಾಧಿಕಾರಿ ಶರತ್ ನಾಯರಿ, ಗೌರವಾಧ್ಯಕ್ಷರಾಗಿ ಮುರಳೀಧರ ಪೈ,ಸಂಘಟನಾ ಕಾರ್ಯದರ್ಶಿ ನವೀನ್ ನಾಯರಿ,ರವಿ ಬನ್ನಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ನಾಯರಿ,ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಗಾಣಿಗ ,ಸಲಹಾ ಸಮಿತಿಯ ಸದಸ್ಯರಾಗಿ ಅಶೋಕ ಪೂಜಾರಿ,ನಿತ್ಯಾನಂದ ನಾಯರಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಮಂಡಳಿ ಹಾಗೂ ಇತತ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.