ಕುಂದಾಪುರ ಮಿರರ್ ಸುದ್ದಿ…
ಕೋಟ: ಯಂಗ್ ಸ್ಟಾರ್ ಫ್ರೆಂಡ್ಸ್ ಹಾಗೂ ಯಕ್ಷ ಮಿತ್ರ ಮೂಡಹಡು ಪಾಂಡೇಶ್ವರ್ ಇದರ 5ನೇ ವರ್ಷದ ಯಕ್ಷ ಸಂಭ್ರಮ ಅದ್ದೂರಿಯಾಗಿ ನೆಡೆಯಿತು.
ವೇದಿಕೆಯಲ್ಲಿ 5ನೇ ವರ್ಷದ ಯಕ್ಷ ಸಂಭ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮ ಹಾಗು ಸನ್ಮಾನ ಕಾರ್ಯಕ್ರಮ ನೆಡೆಯಿತ್ತು, ವೇದಿಯಲ್ಲಿ ಸಭಾ ಅಧ್ಯಕ್ಷತೆಯನ್ನು ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ. ವಿ. ರಮೇಶ್ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಅಂಬಾಗಿಲು ಭವಾನಿ ಬಿಲ್ಡ್‍ರ್ಸ್ ಮಾಲಿಕ
ನಾರಾಯಣ ಆಚಾರ್ಯ, ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಯಶೋಧ ಸಿ ಹೊಳ್ಳ, ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್ ,ಯಂಗ್ ಸ್ಟಾರ್ ಫ್ರೆಂಡ್ಸ್ ಅಧ್ಯಕ್ಷ ಶ್ರೀಶ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಅಭಿಜಿತ್ ಪಾಂಡೇಶ್ವರ್ ನಿರೂಪಿಸಿದರು.
ಪಾಂಡೇಶ್ವರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಳಪಟ್ಟ ಕೊರೋನಾ ವಾರಿಯಸ್‍ಗಳಾದ ಆಶಾ ಕಾರ್ಯಕರ್ತೆ ಕಲ್ಯಾಣಿ, ಸುಮಿತ್ರ ಗೌರವಾರ್ಪಣೆ, ಕ್ರೀಡಾ ಪಟು ಸುಭಾಸ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ನಂತರ ಶ್ರೀ ಗುತ್ಯಮ್ಮ ಕ್ರಪಪೋಷಿತ ಯಕ್ಷಗಾನ ಮಂಡಳಿ ಹೊಸಳ್ಳಿ ಸೋಮವಾರ ಸಂತೆ ಇವರಿಂದ ಅದ್ದೂರಿಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ “ವಜ್ರ ದೈವ ಬೊಬ್ಬರ್ಯ ” ಎಂಬ ಯಕ್ಷಗಾನ ಪ್ರದರ್ಶನ ಜರಗಿತು.