ಕುಂದಾಪುರ ಮಿರರ್ ಸುದ್ದಿ…
ಬೈಂದೂರು : ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ, ವಕೀಲರ ಸಂಘ ಬೈಂದೂರು ಇವರ ಸಂಯುಕ್ರಾಶಯದಲ್ಲಿ ನೂತನವಾಗಿ ಸೃತಸಲ್ಟಟ್ಟ ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಬೈಂದೂರು ಮಯ್ಯಾಡಿ ಹಳೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಶನಿವಾರ ನಡೆಯಿತು.

ನವದೆಹಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಛೇರಿ ಉದ್ಘಾಟಿಸಿ ಮಾತನಾಡಿ, ಬೈಂದೂರಿನ ಜನತೆಗೊಂದು ಚರಿತ್ರಾ ದಿನ ಇಂದು, ಬೈಂದೂರು ಭಾಗದಲ್ಲಿ 2800 ಕೇಸ್ ಇದ್ದು, ಒಂದು ಕೋರ್ಟ್‍ನಲ್ಲಿ 1000 ಸಾವಿರ ಕೇಸ್ ಗಳಿಗೆ ಮಾತ್ರ ಮಾಡಬಹುವುದು, ಆದರೆ ಈ ಕೇಸ್‍ಗಳಿಗೆ ಎರಡು ಶಾಶ್ವತ ಕೋರ್ಟ್‍ನ ಅವಶ್ಯಕತೆ ಬೇಕಿದೆ. ಈ ಭಾಗದಲ್ಲಿ ಕೋರ್ಟ್ ಆಗಿದ್ದು, ಹಲವಾರು ಜನರಿಗೆ ಸಹಾಯ ಸಹಕಾರವಾಗಿದೆ ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು ಇದರ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡುತ್ತಿದ್ದೇವೆ, ನ್ಯಾಯಾಲಯಗಳು ಜನಸ್ನೇಹಿಯಾಗಿ ಇಂದು ವರ್ಚವಲ್ ನ್ಯಾಯಲಯವನ್ನು ಈ ಕೋವಿಡ್ ಸಂದರ್ಭದಲ್ಲಿ ನೆಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇಂಟರ್ನೆಟ್ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು ಜನರಿಗೆ ಪೂರಕದ ಜೊತೆಗೆ ಮಾರಕವು ಆಗಿದೆ ಏಕೆಂದರೆ ಅನೇಕ ರೀತಿಯ ಕ್ರಿಮಿನಲ್ ಚಟುವಟಿಗೆಗಳು ಈ ಇಂಟರ್ ನೆಟ್ ಸೌಲಭ್ಯದಿಂದ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನವದೆಹಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ದೇಶದ ಪ್ರಮುಖ ವಿಷಯಗಳಾದ ಶ್ರೀ ರಾಮ ಜನ್ಮ ಭೂಮಿ, ತ್ರಿವಳಿ ತಲಾಕ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀರ್ಪುನ್ನು ನೀಡಿದ್ದಾರೆ ಅವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ಉಡುಪಿ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯ ಮಹಾ ವಿಲೇಖನಾಧಿಕಾರಿ ಟಿ.ಜಿ. ಶಿವಶಂಕರೇ ಗೌಡ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ನಾಯ್ಕ್, ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯ ಹಿರಿಯ ವಕೀಲ ಉದಯ್ ಹೊಳ್ಳ, ಲೋಕೋಪಯೋಗಿ ಇಲಾಖೆ ಕೇಂದ್ರ ಶಿವಮೊಗ್ಗ ವಲಯದ ಮುಖ್ಯ ಅಭಿಯಂತ ಕಾಂತರಾಜು ಬಿ.ಟಿ, ಬೈಂದೂರು ವಕೀಲರ ಸಂಘದ ಕಾರ್ಯದರ್ಶಿ ಎನ್. ಸುಧೀಂದ್ರ ಆರ್ ಭಟ್ ಉಪಸ್ಥಿತರಿದ್ದರು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶಕ ಸುಬ್ರಹ್ಮಣ್ಯ ಜೆ.ಎಸ್ ಸ್ವಾಗತಿಸಿದರು, ಬೈಂದೂರು ವಕೀಲರ ಸಂಘದ ಅಧ್ಯಕ್ಷ ದೇವಿದಾಸ್ ಆರ್ ಮೇಸ್ತ್ ಪ್ರಾಸ್ತಾವಿಕ ಮಾತನಾಡಿದರು.