ಕುಂದಾಪುರ: ‘ಪಕ್ಷದ ಬಲವರ್ಧನೆಗಾಗಿ ಬೂತ್‌ಮಟ್ಟದಲ್ಲಿ ತಯಾರಿ ಅಗತ್ಯ’ – ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್

0
351

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಬೂತ್ ಮಟ್ಟದ ಕಾರ್ಯಕರ್ತರ ಅಗತ್ಯವಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಾವುದೇ ಪಕ್ಷ ನಡೆಸಿಲ್ಲ. 12 ವರ್ಷಗಳ ಹಿಂದೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅವಕಾಶ  ನೀಡಿದ್ದರು. ಈಗ ಮತ್ತೊಮ್ಮೆ ಅಂತಹ ಅವಕಾಶ ದೊರೆತಿದೆ. ಪಕ್ಷದ ಬಲವರ್ಧನೆಗಾಗಿ ಬೂತ್‌ಮಟ್ಟದಲ್ಲಿ ತಯಾರಿ ಅಗತ್ಯ. ಈಗ ಅದಕ್ಕೆ ಸುವರ್ಣಾವಕಾಶ ದೊರೆತಿದೆ. ಅಂದು ಪಕ್ಷದ ಸದಸ್ಯರಾಗಲು 25 ಪೈಸೆ ನೀಡಬೇಕಿದ್ದು ಈಗ 5 ರೂ. ನೀಡಬೇಕು ಎಂದು ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೇಳಿದ್ದಾರೆ.

ಅವರು ಭಾನುವಾರ ಸಂಜೆ ಇಲ್ಲಿನ ಆರ್.ಎನ್. ಶೆಟ್ಟಿ ಮಿನಿಹಾಲ್‌ನಲ್ಲಿ ನಡೆದ‌ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ, ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click Here

Click Here

9‌ ಜಿಲ್ಲೆಗಳ ಉಸ್ತುವಾರಿ ದೊರೆತಿದ್ದು 7 ಜಿಲ್ಲೆಗಳಲ್ಲಿ ತರಬೇತಿ ನಡೆದಿದೆ. ರಾಜ್ಯದಲ್ಲಿ 60 ಲಕ್ಷ ಸದಸ್ಯರ ನೋಂದಣಿ ಗುರಿ ಇರಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 25 ಸಾವಿರ ಸದಸ್ಯರಾಗಬೇಕು ಎಂಬ ಗುರಿಯಿದೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ಇದು ಅಗತ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸದಸ್ಯತ್ವ ನೋಂದಣಿ ಮುಂದಿನ ಜಿ.ಪಂ., ತಾ.ಪಂ. ಚುನಾವಣೆಗೆ ಸಿದ್ಧತೆಯಾಗಿದೆ. ವಿವಿಧ ಸ್ತರಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ಅತ್ಯಧಿಕ ಸ್ಥಾನಗಳನ್ನು ಕಾಂಗ್ರೆಸ್‌ಗೆ ಪಂಚಾಯತ್‌ಗಳಲ್ಲಿ ನೀಡಿದ ವಿಧಾನಸಭಾ ಕ್ಷೇತ್ರ ಎಂದರೆ ಕುಂದಾಪುರ. ಆಪ್ ಮೂಲಕ ನೋಂದಣಿ  ಸುಲಭವಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿ. ಜಿಲ್ಲೆಯಲ್ಲಿ 2 ಲಕ್ಷ ಸದಸ್ಯರ ನೋಂದಣಿ ಗುರಿ ಇದೆ ಎಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪ್ರಸ್ತಾವನೆ ಮಾಡಿ, ಶಾಸಕರ ಬಳಿ ಇರುವ ಒಂದು ಅಂಶ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಬಳಿ ಇಲ್ಲ. ಅಂತಹ ಬಂಡವಾಳ ಇಲ್ಲದೇ ಗೆಲ್ಲಬಹುದಾದ ನಾಯಕರೆಂದರೆ ಅದು ಮಾಜಿ ವಿಧಾನಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟರು ಮಾತ್ರ. ಹಾಗಾಗಿ ಪ್ರತಾಪರೇ ಅಭ್ಯರ್ಥಿ ಆದರೆ ಕ್ಷೇತ್ರದಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಬ್ಲಾಕ್ ಸದಸ್ಯತ್ವ ನೋಂದಣಿ ಉಸ್ತುವಾರಿ, ಮಂಗಳೂರು ಮನಪಾ ಸದಸ್ಯ ನವೀನ್ ಡಿ’ಸೋಜಾ, ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹೆರಿಯಣ್ಣ, ಜಿಲ್ಲಾ ಕಾಂಗ್ರೆಸ್ ಪ್ರತಿನಿಽ ಅಶೋಕ ಪೂಜಾರಿ ಬೀಜಾಡಿ, ಮೊಳಹಳ್ಳಿ ದಿನೇಶ ಹೆಗ್ಡೆ, ಕೆದೂರು ಸದಾನಂದ ಶೆಟ್ಟಿ, ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ, ಬ್ಲಾಕ್ ಮಹಿಳಾ ವಿಭಾಗ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್ ಕುಂದಾಪುರ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಕೋಟ ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಮಡಿವಾಳ, ಬ್ಲಾಕ್ ಎಸ್‌ಟಿ ಘಟಕ ಅಧ್ಯಕ್ಷ ಜಯರಾಮ ನಾಯ್ಕ ವೇದಿಕೆಯಲ್ಲಿದ್ದರು.

Click Here

LEAVE A REPLY

Please enter your comment!
Please enter your name here