ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕನ ಸಂಗೀತ ಕಾರಂಜಿ ವೀಕ್ಷಣಾ ಗ್ಯಾಲರಿ ನಿರ್ಮಾಣಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ ಸುಮಾರು13ಲಕ್ಷರೂ ಭರಿಸಿದ್ದು ಇದರ ಚೆಕ್ ಅನ್ನು ಬುಧವಾರ ಕಾರಂತ ಥೀಂ ಪಾರ್ಕ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಗೆ ಬ್ಯಾಂಕ್ ನ ಉಡುಪಿ ಪ್ರಾದೇಶಿಕ ಕಛೇರಿಯ ಮುಖ್ಯಸ್ಥ ರಾಜಗೋಪಾಲ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಕೋಟ ಶಾಖಾ ಪ್ರಭಂಧಕ ಸಂತೋಷ್. ಕೆ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಸತೀಶ್ ಕುಂದರ್, ಸೀತಾ, ನಿರ್ಮಿತಿ ಕೇಂದ್ರ ಉಡುಪಿ ಇದರ ಸಚಿನ್ ,ಕಾರಂತ ಥೀಂ ಪಾರ್ಕ ಮೇಲ್ವಿಚಾರಕ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.