ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ: ಕುಂದಾಪುರ ತಾಲೂಕು ಭಜನಾ ಮಂಡಳಿ ಒಕ್ಕೂಟ ಕುಂದಾಪುರ, ವಂಡ್ಸೆ ವಲಯ, ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಇವರ ಸಹಯೋಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಇದರ 20ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 107ನೇ ಮನೆ ಮನೆ ಭಜನಾ ಕಾರ್ಯಕ್ರಮ 20ರ ಸಡಗರ ರಾಮ ನಾಮ ಸಂಭ್ರ್ರಮದ ಸಂದರ್ಭದಲ್ಲಿ ಕೊರೊನಾ ಅಟ್ಟಹಾಸದಿಂದ ಗ್ರಾಮೀಣ ಜನರು ಆತಂಕಕ್ಕೆ ಒಳಗಾದಾಗ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಿ ಜನಸೇವೆಗೈದ ಸ್ಥಳೀಯ ವೈದ್ಯ ಡಾ| ಸುಕೀರ್ತಿ ಶೆಟ್ಟಿ, ಮನೆ ಮನೆ ಭಜನೆಯ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿರುವ ಕುಂದಾಪುರ ತಾಲೂಕು ಭಜನಾ ಮಂಡಳಿ ಒಕ್ಕೂಟ ಕುಂದಾಪುರ ಇದರ ಅಧ್ಯಕ್ಷ ಜಯಕರ ಪೂಜಾರಿ, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಇದರ ಅಧ್ಯಕ್ಷೆ ಸುಮತಿ ಬಿ.ಮೊಗವೀರ ಅವರನ್ನು ಹೆಮ್ಮಾಡಿ ಭಾಸ್ಕರ್ ಆಚಾರ್ಯ ಹಾಗೂ ಲಲಿತಾ ಭಾಸ್ಕರ್ ಆಚಾರ್ಯ ದಂಪತಿಗಳು ಫೆ.24 ರಂದು ಗುರುತಿಸಿ ಸಮ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಂಜಯ್ಯ ಆಚಾರ್ಯ ಹೆಮ್ಮಾಡಿ ಕಟ್ಟು, ಶಾರದಾ, ಮಹಾಬಲ ಆಚಾರ್ಯ, ಮಂಜುಳಾ, ನರಸಿಂಹ ಆಚಾರ್ಯ, ಲಲಿತಾ, ಚಂದ್ರ ಪೂಜಾರಿ ಕನ್ನಡಕುದ್ರು, ಸಂತೋಷ್, ರಜತ್ ಆಚಾರ್ಯ, ರಂಜನ್ ಆಚಾರ್ಯ ಹಾಗೂ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.