ಕುಂದಾಪುರ ಮಿರರ್ ಸುದ್ದಿ…
ಕೋಟ: ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇಲ್ಲಿಗೆ ಕರ್ಣಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿದ ಜನರೇಟರ್ ಅನ್ನು ಶನಿವಾರ ಕರ್ಣಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಮ್ ಎಸ್ ವಿಕ್ಷೀಸಿದರು. ಈ ಸಂದರ್ಭದಲ್ಲಿ ಕೇಂದ್ರದ ವತಿಯಿಂದ ಗೌರವಿಸಲಾಯಿತು.
ಯಕ್ಷವಿದ್ಯಾರ್ಥಿಗಳೊಂದಿಗೆ ಬೆರೆತ ಭಟ್
ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಲಾಕೇಂದ್ರದಲ್ಲಿ ಯಕ್ಷಕಲಿಕಾ ವಿದ್ಯಾರ್ಥಿಗಳಿಗೆ ಯಕ್ಷಗಾನದಲ್ಲಿ ಬರುವ ರಾಮನ ಕಥೆ ಹಾಗೂ ಅವನ ಆದರ್ಶಗಳ ಬಗ್ಗೆ ಪ್ರಶ್ನಿಸಿದರು.
ಈ ದೇಶ ರಾಮನ ತಳಹದಿಯಲ್ಲಿ ಮುನ್ನೆಡಬೇಕಾದ ಅಗತ್ಯತೆಯನ್ನು ಮನಗಾಣಿಸಿ ಬುದ್ಧ,ಏಸು,ಹೀಗೆ ನಾನಾ ದೇವ ಸೃಷ್ಠಿಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಯಕ್ಷಗಾನ ಕೇತ್ರದಲ್ಲಿ ಹಂಗಾರಕಟ್ಟೆ ಕಲಾಕೇಂದ್ರದ ಕೊಡುಗೆ ಅನನ್ಯ ಸಾಕಷ್ಟು ಯುವ ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡಮಾಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್,ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್,ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್,ಕಲಾಕೇಂದ್ರದ ಸೀತಾರಾಮ್ ಸೋಮಯಾಜಿ,ರಾಮಕೃಷ್ಣ ಐತಾಳ್,ರಾಘವೇಂದ್ರ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.