ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇಲ್ಲಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಶಾಲಾ ವಾಹನ ಕೊಡುಗೆಯಾಗಿ ನೀಡಿದೆ.
ಇದನ್ನು ಶನಿವಾರ ಕರ್ಣಾಟಕ ಬ್ಯಾಂಕ್ ಸಿಇಓ ಮಹಾಬಲೇಶ್ವರ ಎಮ್ ಎಸ್ ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಹಾಬಲೇಶ್ವರ ಎಮ್.ಎಸ್ ಹಾಗೂ ನಿವೃತ್ತ ಸೇನಾನಿ ಗಣೇಶ್ ಅಡಿಗ ಇವರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ರಾಜು ಪೂಜಾರಿ,ರತ್ನನಾಗರಾಜ್ ಗಾಣಿಗ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಸದಸ್ಯ ಕೆ.ಅನಂತಪದ್ಮನಾಭ ಐತಾಳ್, ಕುಂದಾಪುರ ಅರವಿಂದ ಮೋಟಾರ್ಸ್ ಮ್ಯಾನೇಜರ್ ಸತೀಶ್ ಗಾಣಿಗ ಉಪಸ್ಥಿತರಿದ್ದರು.ಶಾಲಾ ಹಳೇ ವಿದ್ಯಾರ್ಥಿ ,ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್ ಪ್ರಾಸ್ತಾವನೆ ಸಲ್ಲಿಸಿದರು.ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಸಹಶಿಕ್ಷಕಿ ಪ್ರಭಾವತಿ ನಿರೂಪಿಸಿದರು.