ಬ್ಯಾರೀಸ್ ವಿದ್ಯಾ ಸಂಸ್ಥೆಯಿಂದ “ಸ್ವಚ್ಛ ಕಡಲ ತೀರ, ಹಸಿರು ಕೋಡಿ” ಅಭಿಯಾನ

0
593

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಕೋಡಿ ಕುಂದಾಪುರ ಪ್ರಾರಂಭಿಸಿದ “ಸ್ವಚ್ಛ ಕಡಲ ತೀರ -ಹಸಿರು ಕೋಡಿ” ಅಭಿಯಾನ 2022 – 2 ನೇ ಹಂತ ಕೋಡಿ ಕಡಲ ತೀರದಲ್ಲಿ ಭಾನುವಾರದಂದು ಉತ್ಸಾಹದೊಂದಿಗೆ ನೆರೆವೇರಿತು.

Click Here

ಈ ಸಂದರ್ಭದಲ್ಲಿ ಸಂಸ್ಥೆಯ ವಿಶ್ವಸ್ತರಾದ ಅಬೂಬಕ್ಕರ್ ಸಿದ್ದಿಕ್ ಬ್ಯಾರಿಯವರು ಮಾತನಾಡಿ “ಎಲ್ಲರಿಗೂ ಆ ಪರಮಾತ್ಮನು ಬುದ್ಧಿಶಕ್ತಿಯನ್ನು ದಯಪಾಲಿಸಿದ್ದರೂ, ಒಳ್ಳೆಯ ಕೆಲಸಗಳನ್ನು ಮಾಡಲು ಕೆಲವರನ್ನು ಮಾತ್ರ ಆರಿಸಿ ನೇಮಿಸುತ್ತಾನೆ. ಇಂತಹ ಪವಿತ್ರ ಕಾರ್ಯಮಾಡಲು ದೇವರ ಆಯ್ಕೆಗೆ ನಾವೆಲ್ಲರೂ ಪಾತ್ರರಾಗಿರುವುದು ಮತ್ತು ನಮ್ಮ ಈ ಕೆಲಸವನ್ನು ನಮ್ಮ ನಂತರ ಬೇರೆ ಸಂಸ್ಥೆಗಳು ಕೈಗೆತ್ತಿಕೊಂಡಿರುವುದು , ಇತರ ಪ್ರದೇಶಗಳಲ್ಲಿ ಮಾದರಿಯಾಗಿ ಅಳವಳಿಸಿಕೊಂಡಿರಿವುದು ಸಂತೃಪ್ತಿ ನೀಡುವ ವಿಷಯವಾಗಿದೆ”. ಪರಿಪೂರ್ಣ ಶಿಕ್ಷಣದ ಕಲ್ಪನೆಯ ನೆಲೆಯಲ್ಲಿ ಬ್ಯಾರೀಸ್ ಗ್ರೂಪಿನ ಛೇರ್ಮನ್ ರಾದ ಸಯ್ಯದ್ ಮಹಮದ್ ಬ್ಯಾರಿಯವರು ಪ್ರಾರಂಭಿಸಿದ ಈ ಅಭಿಯಾನ ಊರಿನವರ ಸಹಕಾರದಿಂದ ಉತ್ತಮವಾಗಿ ಸಾಕಾರಗೊಳ್ಳುತ್ತಿರುವದರ ಕುರಿತು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ,ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು , ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಈ ಕಾರ್ಯದಲ್ಲಿ ನಮಗೆ ಸಹಕಾರವನ್ನು ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here