ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ಅಧಿದೇವತೆ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 30 ರಿಂದ ಮೇ 2 ರ ವರೆಗೆ ನಡೆಯಲಿರುವ ಮಹಾ ರುದ್ರಹೋಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಹೊಳ್ಳ, ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಸಮಿತಿಯ ಸದಸ್ಯರಾದ ಸತೀಶ್ ಶೆಟ್ಟಿ, ನಾಗರಾಜ್ ರಾಯಪ್ಪನ ಮಠ, ವಿಶ್ವನಾಥ ಗರಡಿಮನೆ, ವೀಣಾ ಎಚ್, ಜಯಾನಂದ ಖಾರ್ವಿ, ಸವಿತ ಜಗದೀಶ್, ಸತೀಶ್ ಉಪಸ್ಥಿತರಿದ್ದರು.