ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ಫೆ.25ರಂದು ಸೌಕೂರು ರಥೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್‍ನಿಂದ ಮೃತ ಪಟ್ಟ ಸೌಕೂರು ನಿವಾಸಿ ಪ್ರಶಾಂತ್ ದೇವಾಡಿಗ ಅವರ ಕುಟುಂಬ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿಯವರು ವೈಯಕ್ತಿಕ ನೆಲೆಯಲ್ಲಿ ರೂ.1 ಲಕ್ಷವನ್ನು ನೀಡಿದರು.
ಮಾ.3ರಂದು ಶಾಸಕರು ಪ್ರಶಾಂತ್ ದೇವಾಡಿಗ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ನೆರವು ಹಸ್ತಾಂತರಿಸಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಶಾಂತ್ ದೇವಾಡಿಗ ಬಿ.ಬಿ ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿ. ಕುಟುಂಬದ ಆಧಾರಸ್ತಂಭವಾಗಿದ್ದ. ಇದೊಂದು ದುರಾದೃಷ್ಟಕರವಾದ ವಿಚಾರ. ನನಗೆ ಅತೀವ ದುಃಖ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಅವರು ರೂ.15 ಸಾವಿರ ನೆರವು ಹಸ್ತಾಂತರಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ಪೂಜಾರಿ ಗುಲ್ವಾಡಿ, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಕುಪ್ಪ ಸೌಕೂರು, ಜಯರಾಮ ಶೆಟ್ಟಿ ಹಡಾಳಿ, ಆಶಾ ಸಂತೋಷ್ ಪೂಜಾರಿ, ರೀತಾ ದೇವಾಡಿಗ ಸೌಕೂರು, ರಂಜಿತ್ ಪೂಜಾರಿ ಕರ್ಕಿ, ಬಿಜೆಪಿ ಗುಲ್ವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಗುಲ್ವಾಡಿ, ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕಾರ್ಯದರ್ಶಿ ಉದಯ ದೇವಾಡಿಗ, ಸ್ಥಳೀಯರಾದ ಗೋಪಾಲ ದೇವಾಡಿಗ, ಪ್ರಮುಖರಾದ ಸಂಜೀವ ದೇವಾಡಿಗ ತಲ್ಲೂರು, ರಾಜೀವ ಶೆಟ್ಟಿ ಹಟ್ಟಿಯಂಗಡಿ, ನಾರಾಯಣ ನಾಯ್ಕ ನೇರಳಕಟ್ಟೆ ಮೊದಲಾದವರಿದ್ದರು.