ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಿಂದೂ ಸಮಾಜವನ್ನು ಜೈ ಭೀಮ್ ಹೆಸರಿನಲ್ಲಿ ಒಡೆಯಲು ಸಾಧ್ಯವಿಲ್ಲ. ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ. ನಮಗೆ ರಾಮ, ಭೀಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ರಾಮನು ನಮ್ಮವನೆ ಭೀಮನು ನಮ್ಮವನೆ ಎಂಬ ಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ್ದೇವೆ. ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಆಗಲ್ಲ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.
Video:
ಭಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಖಂಡಿಸಿ, ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದೂ ಬಳಗ ನಾವುಂದ, ಮರವಂತೆ, ಕಿರಿಮಂಜೇಶ್ವರ, ನಾಡ ವಲಯದ ವತಿಯಿಂದ ಬೈಂದೂರು ತಾಲೂಕಿನ ಮರವಂತೆ ಶ್ರೀ ರಾಮಮಂದಿರ ಮರವಂತೆಯಿಂದ ಅರೆಹೊಳೆ ಕ್ರಾಸ್ ನಂದಿಕೇಶ್ವರ ದೇವಸ್ಥಾನದವರೆಗೆ ಬೃಹತ್ ಪಂಜಿನ ಮೆರವಣಿಗೆ ಜರುಗಿದ್ದು ಬಳಿಕ ನಡೆದ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.
ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಕೈಯಲ್ಲಿರುವ ಪಂಜು ಆರಿದರೂ ಹೃದಯದಲ್ಲಿನ ಕಿಚ್ಚು ಆರುವುದಿಲ್ಲ. ಹಿಂದುತ್ವಕ್ಕಾಗಿ ನಡೆದ ಬಲಿದಾನ ವ್ಯರ್ಥವಾಗಲ್ಲ ಎಂದು ಅವರು ಹೇಳಿದರು.
ಹಿಂದೂ ಸಮಾಜ ನಾಶ ಮಾಡಲು ಜಿಹಾದಿಗಳು ಮುಂದಾಗಿದ್ದಾರೆ. ಹೆದರಿಸುವ ಮಂದಿಗೆ ತಕ್ಕ ಉತ್ತರ ಕೊಡಲು ಸಿದ್ಧರಾಗಬೇಕು. ಯಾವುದೇ ಪಕ್ಷದವರು ಯಾವುದೇ ಜಾತಿಯವರು ಆಗಿದ್ದರು ಕೂಡ ಮನೆಯಲ್ಲೊಂದು ಭಗವಧ್ವಜ ಇರಲಿ. ಹೆಗಲ ಮೇಲೆ ಕೇಸರಿ ಶಾಲಿರಲಿ. ಇದರಿಂದ ಧರ್ಮ ರಕ್ಷಣೆ ಸಾಧ್ಯ ಎಂದು ಅವರು ಕರೆಕೊಟ್ಟರು.
ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮರವಂತೆ ರಾಮಮಂದಿರದಲ್ಲಿ ವಾಸು ಖಾರ್ವಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ನಿತ್ಯಾನಂದ ಉಪ್ಪುಂದ, ಅಕ್ಷಯ್ ತಗ್ಗರ್ಸೆ ಪ್ರಾರ್ಥಿಸಿದರು.