ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ 110ನೇ ವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ

0
515

ಕುಂದಾಪುರ ಮಿರರ್ ಸುದ್ದಿ…

ಕೋಟ : ಸ್ಥಳೀಯಾಡಳಿತಗಳು ತಮ್ಮ ಎಸ್ ಎಲ್ ಎಂ ಆರ್ ಘಟಕಗಳ ಮೂಲಕ ಕಸವಿಲೇವಾರಿ ಮಾಡಲು ಆರಂಭಿಸಿವೆ ಇಷ್ಟಾಗಿಯೂ ಇನ್ನು ಕೂಡಾ ಕಂಡ ಕಂಡಲ್ಲಿ ಕಸ ಎಸೆಯುವ ಸಂಖ್ಯೆ ಕ್ಷೀಣಿಸಿಲ್ಲ ಇದಕ್ಕೆ ಅಗತ್ಯವಾಗಿ ಕಡಿವಾಣ ಹಾಕಬೇಕಿದೆ ಎಂದು ಕೋಟದ ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್ ಹೇಳಿದ್ದಾರೆ.

Click Here

ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ,ಯಕ್ಷ ಸೌರಭ ಕಲಾರಂಗ ಕೋಟ,ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ 110ನೇ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ ಕೋಟ ಗ್ರಾ.ಪಂ ವ್ಯಾಪ್ತಿಯ ರಸ್ತೆ ಹಾಗೂ ಮಣೂರು ಪಡುಕರೆ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ ಬದಲಾವಣೆ ಜಗದ ನಿಯಮ ಆದರೆ ಅದೇ ಬದಲಾವಣೆ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಆಗಬೇಕು,ಹಿಂದಿನ ಕಾಲದಲ್ಲಿ ದಿನಬಳಕೆಗೆ ಮರವನ್ನು ಬಳಸುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ ಗ್ಯಾಸ್ ,ವಿದ್ಯುತ್ಛಕ್ತಿ ಮೂಲಕ ಬಳಕೆಯಾಗುತ್ತಿದೆ ಅದರೇ ರೀತಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು,ದೇವ ಸೃಷ್ಠಿಯ ಜಗತ್ತನ್ನು ಮನುಜಕುಲ ಹಾಳುಗೆಡವ ಮನಸ್ಥಿತಿ ಬಿಟ್ಟು ಹಿಂದೆ ಅತಿ ಹೆಚ್ಚು ಬಳಸುತ್ತಿದ್ದ ಪರಿಸರಸ್ನೇಹಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕರೆಇತ್ತು ಕಾರ್ಕಳದಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಮಾಸತಂಡ ನೇತ್ರತ್ವದ ಸ್ವಚ್ಛತಾ ಉತ್ಸವಕ್ಕೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ಜಯರಾಮ ಶೆಟ್ಟಿ ಮಣೂರು,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಗೀತಾನಂದ ಫೌಂಡೇಶನ್ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಕೋಟ,ವಿಪ್ರ ಮಹಿಳಾ ಬಳಗದ ವನೀತಾ ಉಪಾಧ್ಯ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ.ಕೆ ಹಂದಟ್ಟು,ಪಂಚವರ್ಣ ಸಂಚಾಲಕ ಅಜಿತ್ ಆಚಾರ್ಯ, ಉಪಾಧ್ಯಕ್ಷ ರವೀಂದ್ರ ಜೋಗಿ,ಮನೋಹರ್ ಪೂಜಾರಿ,ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಲೋಲಾಕ್ಷಿ ಕೋಟೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

LEAVE A REPLY

Please enter your comment!
Please enter your name here