ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಇಲ್ಲಿನ ಗಂಗೊಳ್ಳಿ ಸೇವಾ ಸಹಕಾರ ಬ್ಯಾಂಕ್‍ನ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕ ಮಂಡಳಿಗೆ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಚುನಾವಣೆ ನಡೆಯಿತು.
ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ಹಾಲಿ ಅಧ್ಯಕ್ಷ ಆನಂದ ಬಿಲ್ಲವ, ಮಹಿಳಾ ಮೀಸಲು ಸ್ಥಾನದಿಂದ ಪ್ರೇಮಾ ಪೂಜಾರಿ, ಯಮುನಾ, ಹಿಂ.ವರ್ಗ ಮೀಸಲು (ಪ್ರವರ್ಗ-ಬಿ) ಸ್ಥಾನದಿಂದ ಚಂದ್ರಮತಿ ಡಿ.ಹೆಗ್ಡೆ, ಪ.ಜಾತಿ ಮೀಸಲು ಸ್ಥಾನದಿಂದ ನಾಗರಾಜ ಎಂ., ಸಾಮಾನ್ಯ ಕ್ಷೇತ್ರದಿಂದ ಶ್ರೀನಿವಾಸ ಜತ್ತನ್, ಹರೀಶ ಮೇಸ್ತ, ಮಾಧವ ಖಾರ್ವಿ, ವಾಸುದೇವ ಶೇರುಗಾರ್, ಸುಭಾಶ್ಚಂದ್ರ ಪೂಜಾರಿ, ಗೋಪಾಲ ನಾಯ್ಕ್, ಚಂದ್ರಶೇಖರ ಪೂಜಾರಿ ಆಯ್ಕೆಯಾಗಿದ್ದಾರೆ. ಪ.ಪಂಗಡ ಮೀಸಲು ಸ್ಥಾನದಿಂದ ಲಕ್ಷ್ಮಣ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ಉಪಸ್ಥಿತರಿದ್ದರು.