ಸ್ವಾಲಂಬಿ ಬದುಕಿಗೆ ಅಣಬೆ ಕೃಷಿ ಸಹಕಾರಿ – ಜಿ.ಪಂ ಯೋಜನಾ ನಿರ್ದೇಶಕ ಬಾಬು.ಎನ್

0
660

ಕುಂದಾಪುರ ಮಿರರ್ ಸುದ್ದಿ…

ಕೋಟ: ಅಣಬೆ ಕೃಷಿ ಲಾಭದಾಯಕ ಕೃಷಿಗಳಲ್ಲೊಂದು ಆ ಮೂಲಕ ಮಹಿಳೆ ಸ್ವಾಲಂಬಿ ಬದುಕಿಗೆ ಮುನ್ನುಡಿ ಬರೆಯಬೇಕಾದ ಅಗತ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎನ್ ಹೇಳಿದರು.

ಗುರುವಾರ ಕೋಟದ ಕಾರಂತ ಥೀಂ ಪಾಕ್9ನಲ್ಲಿ ಗ್ರಾಮೀಣಾಭಿವೃದ್ಧಿ ಸ್ವುದ್ಯೋಗ ತರಬೇತಿ ಸಂಸ್ಥೆ ರುಡ್ ಸೆಟ್ ಬ್ರಹ್ಮಾವರ ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದಡಿ ಕೋಟತಟ್ಟುಗ್ರಾಮಪಂಚಾಯತ್ ಮಟ್ಟದ ವಾಡ್9 ಸಿಂಧೂರ ಸಂಜೀವಿನಿ ಸ್ವಸಹಾಯ ಒಕ್ಕೂಟಗಳ ಆಶ್ರಯದಲ್ಲಿ ಹತ್ತು ದಿನಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿ ಅಣಬೆ ಒಂದು ಆರೋಗ್ಯ ವರ್ಧಕ ಹಾಗೂ ವೃದ್ಧಿಸುವ ಸಸ್ಯಹಾರಿಗೆ ಸೇರಿದ ವಸ್ತುವಾಗಿದ್ದು ಇದಕ್ಕೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ದೊರಕುತ್ತಿದೆ.ಇದನ್ನು ಈ ಗ್ರಾಮೀಣ ಭಾಗದಲ್ಲಿ ವ್ಯವಹಾರಿಕಾ ವಾಣಿಜ್ಯ ಬೆಳೆಯಾಗಿ ರೂಪಿಸಿಕೊಳ್ಳಿ ಎಂದರಲ್ಲದೆ ಶಿಬಿರಗಳನ್ನು ಆಯೋಜಿಸುವುದಕ್ಕೆ ಸೀಮಿತಗೊಳ್ಳದೆ ಅದರ ಅನುಷ್ಠಾನವು ಪೂರ್ಣಪ್ರಮಾಣದಲ್ಲಿ ಆಗಬೇಕು ಆಗ ನಾವು ಪಡೆದ ಮಾಹಿತಿಗೆ ಮೌಲ್ಯ ದೊರಕುತ್ತದೆ ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

Click Here

ಕಾರ್ಯಕ್ರಮವನ್ನು ಸಿಂಧೂರ ಸಂಜೀವಿನಿ ಸ್ವಸಹಾಯ ಸಂಘ ಕೋಟತಟ್ಟು ಇದರ ಅಧ್ಯಕ್ಷೆ ಮಾಲತಿ ರವಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ವಹಿಸಿದ್ದರು.

ಅತಿಥಿಗಳಾಗಿ ಉಡುಪಿ ಜಿ.ಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸೋಜ,ತಾಲೂಕು ಟಿ.ಪಿ.ಓ ಕೃಷ್ಣ ಸಾಗರ್,ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಆಚಾರ್ಯ, ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ಇದರ ನಿರ್ದೇಶಕ ಪಾಪ ನಾಯಕ್,ಉಪವ್ಯವಸ್ಥಾಪಕ ಸಂತೋಷ್ ಶೆಟ್ಟಿ,ಸಿಂಧೂರ ಸಂಜೀವಿನಿ ಒಕ್ಕೂಟದ ಶ್ಯಾಮಲ ಸಿ,ಪುತ್ರನ್,ವಸಂತಿ ಮತ್ತಿತರರು ಉಪಸ್ಥಿತರಿದ್ದರು.ಸಂಜೀವಿನಿ ಒಕ್ಕೂಟದ ಸುಜಾತ ಉದಯ್ ತಿಂಗಳಾಯ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಅಧಿಕಾರಿ ವಾಣಿಶ್ರೀ ನಿರೂಪಿಸಿದರು.

LEAVE A REPLY

Please enter your comment!
Please enter your name here