ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಜ್ಯ ಸರಕಾರದ ವಿನೂತನ ಯೋಜನೆಯಾದ ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆಯ ದಾಖಲೆ ನೀಡುವ ಕಾರ್ಯಕ್ರಮ ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ನರಸಿಂಹ ಅಡಿಗ ಮನೆಗೆ ಕೋಟ ಕಂದಾಯ ನೀರಿಕ್ಷಕ ರಾಜು ಪಹಣಿಪತ್ರ,ಆರ್ ಟಿ ಸಿ ಇತರ ದಾಖಲೆಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೋಟ, ಐರೋಡಿ ಗ್ರಾಮಪಂಚಾಯತ್ ಗ್ರಾಮಲೆಕ್ಕಿಗ ಚಲುವರಾಜು,ಸಹಾಯಕ ನರಸಿಂಹ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.