ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಗ್ರಾಮ ಪಂಚಾಯತ್ ಇದರ ಕರ್ನಾಟಕ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯು ಇತ್ತೀಚಿಗೆ ಪಂಚಾಯತ್‍ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ವಹಿಸಿ ಮಾತನಾಡಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಭೆಯ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿರುವ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ವಾರ್ಷಿಕ ಗುರಿ ಹಾಗೂ ಅವರು ಸಾಧಿಸಿದ ಪ್ರಗತಿಗಳ ಬಗ್ಗೆ ಮಂಡಿಸಿದರು.
ಸಭೆಯಲ್ಲಿ ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಸಚ್ಚಿದಾನಂದ ಭಟ್ ವೈದ್ಯಾಧಿಕಾರಿ, ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಸಿಹೆಚ್‍ಓ ಪರಸಪ್ಪ, ಮೆಸ್ಕಾಂ ಇಲಾಖೆ ಸಾಸ್ತಾನ ಮೇಲ್ವಿಚಾರಕರು ಸುಕುಮಾರ ಶೆಟ್ಟಿ , ಉಡುಪಿ, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ಇದರ ಮೇಲ್ವಿಚಾರಕಿ ಎಂ. ಶೈಲಜಾ, ಪಶು ಆಸ್ಪತ್ರೆ ಸಾಸ್ತಾನ ವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ, ಶಿಶು ಅಭಿವೃದ್ದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ, ಕೋಡಿ ಗ್ರಾಮ ಲೆಕ್ಕಿಗ ಗಿರೀಶ್ ಕುಮಾರ್ ಕೆ , ಸೋಮ ಬಂಗೇರಾ ಸರಕಾರಿ ಪ್ರೌಡಶಾಲೆ ಕೋಡಿ ಕನ್ಯಾಣ ಮುಖ್ಯೋಪಾಧ್ಯಾಯನಿ ರಾಧಿಕಾ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಮುಖ್ಯ ಶಿಕ್ಷಕಿ ಸಂಪಾ , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಂಥಪಾಲಕಿ, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.