ಗುರುಹಿರಿಯರು ಹಾಕಿಕೊಟ್ಟ ಸಂಸ್ಕಾರದಲ್ಲಿ ಇಂದಿನ ಯುವ ಸಮುದಾಯ ಮರೆಯಬಾರದು-ವಿದ್ವಾನ್ ಹಾಗೂ ಅಘೋರೆಶ್ವರ ದೇವಳದ ಪ್ರಧಾನ ಅರ್ಚಕ ಬಾಲಕೃಷ್ಣ ನಕ್ಷತ್ರಿ
ಕುಂದಾಪುರ ಮಿರರ್ ಸುದ್ದಿ…
ಕೋಟ: ಗುರು ಹಿರಿಯರು ನಮಗೆ ದಿನನಿತ್ಯ ಹೇಗಿರಬೇಕು ಎಂಬ ಪಾಠವನ್ನು ತಿಳಿಸಿಕೊಟ್ಟಿದ್ದಾರೆ. ಅದರಂತೆ ನಾವು ನಡೆಯಬೇಕು ಎಂದು ವಿದ್ವಾನ್ ಹಾಗೂ ಅಘೋರೆಶ್ವರ ದೇವಳದ ಪ್ರಧಾನ ಅರ್ಚಕ ಬಾಲಕೃಷ್ಣ ನಕ್ಷತ್ರಿ ಹೇಳಿದ್ದಾರೆ.
ಮಾರಿಯಮ್ಮ ದೇವಸ್ಥಾನ ಚಿತ್ರಪಾಡಿ ಸಾಲಿಗ್ರಾಮ ಇದರ ವಾರ್ಷಿಕ ವರ್ಧಂತಿಯ ಪ್ರಯುಕ್ತ ಹಮ್ಮಿಕೊಳ್ಳಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸನಾತನ ಧರ್ಮವನ್ನು ಉಳಿಸಬೇಕಾದರೆ ನಾವೆಲ್ಲರು ಧರ್ಮವನ್ನು ರಕ್ಷಣೆ ಮಾಡಬೇಕು. ಧರ್ಮ ಎಂಬ ಶಬ್ದವನ್ನು ರಕ್ಷಿಸಬೇಕಾದರೆ ಮಾನವನ ಮನಸ್ಸಿನಿಂದ ಮಾತ್ರ ಸಾಧ್ಯ ಆಗ ನಮ್ಮ ಸಮಾಜ ಸುಸ್ಥಿರವಾಗಲು ಸಾಧ್ಯ . ನಾವು ಸಂಸ್ಕಾರವಂತರಾಗಲು ಪದೇ ಪದೇ ಆಚರಣೆಯಂತಹ ಮಹತ್ವಗಳನ್ನು ಅರಿಯಬೇಕು.ನಾವೇಲ್ಲರು ಸನಾತನ ಧರ್ಮವನ್ನು ಪಾಲಿಸಬೇಕಾಗಿರುವುದು ಇಂದಿನ ದಿನದಲ್ಲಿ ಅತೀ ಮುಖ್ಯ ಎಂದರು.
ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಮಾತನಾಡಿ ಒಂದು ಊರಿನಲ್ಲಿ ಒಂದು ಒಳ್ಳೆಯ ದೇವಸ್ಥಾನ, ಶಾಲೆ, ಯುವ ಸಂಘಟನೆ ,ಸಾಮಾಜಿಕ ಧಾರ್ಮಿಕ ಆರ್ಥಿಕ ಚಿಂತಕರು ಇದ್ರೆ ಅಲ್ಲಿ ಸಾತ್ವಿಕತೆ ಇರುತ್ತದೆ. ಭವಿಷ್ಯದಲ್ಲಿ ದೇವಳವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂಬುವುದು ನಮ್ಮ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತಕರಾದ ನರಸಿಂಹ ಮಧ್ಯಸ್ಥ,ವೆಂಕಟರಮಣ ಉಪಾಧ್ಯ,ಹರೀಶ್ಚಂದ್ರ ಐತಾಳ್, ದೇವಳದಲ್ಲಿ ಸೇವೆಯನ್ನು ಸಲ್ಲಿಸಿರುವ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಅಧ್ಯಕ್ಷೆ ಸುಲತಾ ಹೆಗ್ಡೆ ,ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರಕುಮಾರ್ ಕೋಟ, ದೇವಳದ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಉಪಾಧ್ಯ,ಕಾರ್ಯದರ್ಶಿ ಆನಂದ ಗಾಣಿಗ,ಕೃಷ್ಣಮೂರ್ತಿ ಭಟ್,ಗೋಳಿಗರಡಿ ಮೇಳದ ವ್ಯವಸ್ಥಾಪಕ ವಿಠಲ ಪೂಜಾರಿ,ಉದ್ಯಮಿ ಅರುಣ್ ಕುಂದರ್ ,ಕೊಗ್ಗ ರಾಮದಾಸ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಲಕ್ಷ್ಮೀನಾರಯಣ ಕಾರಂತ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಾಗೇಂದ್ರ ಆಚಾರ್ ನಿರೂಪಿದರು.