ಕುಂದಾಪುರ ಮಿರರ್ ಸುದ್ದಿ…
ಕೋಟ: ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ವತಿಯಿಂದ ವಡ್ಡರ್ಸೆ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಮಾ.8ರಂದು ವಿಶ್ವ ಮಹಿಳೆಯರ ದಿನಾಚರಣೆಯ ಅಂಗವಾಗಿ ಸ್ಥಳೀಯ ಮಹಿಳಾ ಸಾಧಕಿಯರಾದ ನಾಗು ಅಜ್ಜಿ ಹಾಗೂ ಸುಜಾತ ಹೆಬ್ಬಾರ್‍ರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಮಹಿಳಾ ಸಾಧಕಿಯರನ್ನು ಜೆಸಿಐ ಮಹಿಳಾ ಅಧ್ಯಕ್ಷೆ ಯೋಗಿನಿ ಭಟ್ ಹಾಗೂ ಕಾರ್ಯದರ್ಶಿ ದೀಪಿಕಾ ಐತಾಳ ಸನ್ಮಾನಿಸಿದರು. ಸಾಧಕಿಯರನ್ನು ಶ್ರೀಕಾಂತ್ ಭಟ್ ಉಪ್ಲಾಡಿ ಪರಿಚಯಿಸಿದರು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ನಾಗೇಂದ್ರ ಅಡಿಗ ವಹಿಸಿದ್ದರು. ಕಾರ್ಯಕ್ರಮವನ್ನು ಸ್ಥಾಪಕಾಧ್ಯಕ್ಷ ಸಚ್ಚಿದಾನಂದ ಅಡಿಗ ನಿರೂಪಿಸಿದರು. ಪದ್ಮನಾಭ ಆಚಾರ್ಯ ಧನ್ಯವಾದಗೈದರು. ಈ ಸಂದರ್ಭದಲ್ಲಿ ಜೆಸಿಐ ಕಾರ್ಯದರ್ಶಿ ಪ್ರವೀಣ್ ಕುಮಾರ ಹಾಗೂ ಸಂಸ್ಥೆಯ ಪ್ರಮುಖರಾದ ಮಹೇಶ್ ಸದಸ್ಯರಾದ ಪುನೀತ್, ಸುಭದಾ ಭಟ್, ಕಲಾವತಿ, ಶ್ರೀರಕ್ಷಾ ಅಡಿಗ ಉಪಸ್ಥಿತಿತರಿದ್ದರು.