ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನಮ್ಮ ನಮ್ಮ ಮನೆಯಿಂದಲೇ ಪ್ರಕೃತಿ ಮೇಲೆ ಕಾಳಜಿ ಆರಂಭಗೊಂಡರೆ ಪರಿಸರ ಉಳಿಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದ್ದಾರೆ.
ಅವರು ಕೋಡಿ ಕಡಲತೀರದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ನೇತೃತ್ವದಲ್ಲಿ ನಡೆದ 125ನೇ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಕಡಲ ತೀರಗಳಲ್ಲಿ ಕಸ ಎಸೆಯುವರು ಮನುಷ್ಯರ ಎಂಬುದು ಪಶ್ನೆ? ಎಲ್ಲರೂ ನೈಜ ಚಾರಣಿಗರು ಅಲ್ಲ, ಮೋಜು ಮಸ್ತಿಗೆ ಬರುವ ಚಾರಣಿಗರ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ ಇದರಿಂದ ಪಾಕೃತಿಕ ದುರಂತಗಳು ಹೆಚ್ಚುತ್ತಿದೆ. ನಾವು ಸರಕಾರಕ್ಕೆ ಅಥವಾ ವ್ಯವಸ್ಥೆಯನ್ನು ದೂರುತ್ತೇವೆ. ಪರಿಸರ ರಕ್ಷಣೆ ನಮ್ಮ ಪಾತ್ರವೇನು ಏನೆಂಬುವುದನ್ನು ಮನಗಾಣಿಸಿದರು.
ಪಶ್ಚಿಮ ಘಟ್ಟ ಇದ್ದ ಕಾರಣಕ್ಕೆ ದಕ್ಷಿಣ ಭಾರತದ ಜೀವ ಸಂಕುಲನಕ್ಕೆ ಚೈತನ್ಯ ಶಕ್ತಿ ಸಿಕ್ಕಿದೆ. ಇಲ್ಲವಾದಲ್ಲಿ ಅವಗಳಿಗೂ ಸಂಚಕಾರ ಬರುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದರಲ್ಲದೆ
ಕಡಲ ತೀರದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿರುವ ಸಂಘಟನೆಯ ಕಾರ್ಯಕ್ಕೆ ಶ್ಲಾಘಿಸಿ ಇಂಥ ಸಂಘಟನೆಗಳು ಗ್ರಾಮ ಗ್ರಾಮದಲ್ಲಿ ಹುಟ್ಟಿಗೊಂಡು ಪರಿಸರ ಸಂರಕ್ಷಣೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಸ್ವಚ್ಚತಾ ಅಭಿಯಾನದಲ್ಲಿ ಅರಣ್ಯ ಇಲಾಖೆಯ ಕುಂದಾಪುರದ ಉಪ ಸಂರಕ್ಷಣಾಧಿಕಾರಿ ಡಾ.ಆಶಿಶ್ ರೆಡ್ಡಿ, ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಮೂಳೆತಜ್ಞ ಡಾ. ದುರ್ಗಾ ಪ್ರಸಾದ್ ,ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಆಂದೋಲನದ ಕೆಂಚನೂರು ಸೋಮಶೇಖರ ಶೆಟ್ಟಿ ,ಬೆಂಗಳೂರಿನ ರಮೇಶ್ ರಾವ್, ಎಪ್ಎಸ್ಎಲ್ ನ ವೆಂಕಟೇಶ್, ದಿನೇಶ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್, ಆಶಾಲತಾ ಶೆಟ್ಟಿ ಕುಂದಾಪುರ ಸನ್ ರೈಸ್ ರೋಟರಿಯ ಗಣೇಶ್ ಹಾಗೂ ಸದಸ್ಯರು ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಭಾಸ್ಕರ್ ಪೂಜಾರಿ,ಪುಂಡಲೀಕ ಬಂಗೇರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಸ್ವಯಂಸೇವಕರು ಉಪಸ್ಥಿತರಿದ್ದರು.