ಅಂಗವಿಕಲತೆ ಮಾಯವಾಗಿಸುವುದಕ್ಕೆ ಯಕ್ಷಗಾನದಲ್ಲಿ ತರಬೇತಿ ಅತ್ಯಗತ್ಯ: ಗೋಪಾಲಕೃಷ್ಣ ನಾಯರಿ

0
205

ಕುಂದಾಪುರ ಮಿರರ್ ಸುದ್ದಿ…

ಕೋಟ: ತರಬೇತಿ ಇಲ್ಲದೇ ಭಾಗವಹಿಸುವಿಕೆಯಲ್ಲಿನ ಶಿಸ್ತನ್ನು ಗಮನಿಸಿ, ನಮ್ಮನ್ನು ಬಹುತೇಕರು ನಿರಾಕರಿಸುವುದು ಸಹಜ. ಉದಾಹರಣೆಗೆ ಕೃಷಿ. ಬೇಕಾದ ಕನಿಷ್ಠ ತರಬೇತಿಗಳನ್ನು ಪಡೆಯದೇ ಮಾಡುವ ಕೃಷಿ ಲಾಭದಾಯಕವಾಗಿರುವುದಿಲ್ಲ. ಆಧುನಿಕ ಪ್ರಪಂಚದಲ್ಲಿ ಕಲಾ ಪ್ರಪಂಚಕ್ಕೆ ಕಾಲಿಡಬೇಕಾದರೆ, ಅದರಲ್ಲೂ ಕಾಲನ್ನೇ ಹೆಚ್ಚು ಬಳಸುವ ಯಕ್ಷಗಾನಕ್ಕೆ ಬರಬೇಕಾದರೆ ಅಂಗವಿಕಲತೆ ಮಾಯವಾಗಿಸುವುದಕ್ಕೆ ತರಬೇತಿ ಅತ್ಯಗತ್ಯ. ಬಹುತೇಕ ಮೇಳಗಳಲ್ಲಿ ತಳ ಪರದೆಗಳನ್ನು ಹಾಕಿ ಸರಿಯಾದ ತರಬೇತಿಯನ್ನು ಪಡೆಯದೇ ಇರುವ ಕಲಾವಿದರು ಯಕ್ಷಗಾನವನ್ನು ಅಂಗವಿಕಲತೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನವನ್ನು ನೋಡಿದವರಿಗೆ ಅನ್ನಿಸುವುದು ಹೀಗೆ. ಹಾಗಾಗಿ ತರಬೇತಿ ಇಲ್ಲದೇ ಯಾವುದೇ ಪ್ರಕಾರಗಳನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಯಕ್ಷಗಾನ ಕಾಡುವ ಲಯ. ಕಲಾ ರಸಿಕರನ್ನು ಆಕರ್ಷಿಸುವ ಲಯ ಎಂದು ಉಭಯ ಸಂಸ್ಥೆಗಳನ್ನು ಪ್ರಶಂಶಿಸಿ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಮಾತನಾಡಿದರು.

Click Here

ತೆಕ್ಕಟ್ಟೆ ಹಯಗ್ರೀವದಲ್ಲಿ ಮಾರ್ಚ್ 13ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಮೇಳಕ್ಕೆ ಕಲಾವಿದರಾಗಿ ನೇಮಕಗೊಂಡ ಚಂದ್ರಯ್ಯ ಆಚಾರ್ ಪೆರ್ಡೂರು ಮೇಳ, ಲೋಹಿತ್ ಕೊಮೆ ಮಂದಾರ್ತಿ ಮೇಳ, ಭರತ್‍ಚಂದನ್ ಮಂದರ್ತಿ ಮೇಳ, ದರ್ಶನ್ ಗೌಡ ಮಾರಣಕಟ್ಟೆ ಮೇಳ ಈ ಕಲಾವಿದರನ್ನು ಅಭಿನಂದಿಸಿ ನಾಯರಿ ಮಾತನ್ನಾಡಿದರು.

ಯಕ್ಷಗಾನ ಎಲ್ಲಾ ಕಲೆಯನ್ನು ಮೀರಿದ ಕಲೆ. ಲಯ, ಶೃತಿ, ತಾಳವೆಲ್ಲವನ್ನೂ ತರಬೇತಿ ಪಡೆಯದ ವ್ಯಕ್ತಿ ಬರೇ ಯಕ್ಷಗಾನ ನೋಡಿ ಕಲಿತು ಮೆರೆದವರು, ಬದುಕನ್ನು ಕಟ್ಟಿಕೊಂಡವರು ಈ ಯಕ್ಷರಂಗದಲ್ಲಿ ಅನೇಕರಿದ್ದಾರೆ. ಎಲ್ಲರಿಗೂ ಯಕ್ಷಗಾನ ಕಲಿಸಲು ಕಷ್ಟ. ಕಲಿಯುವವರಲ್ಲಿ ಆ ಅರ್ಹತೆ ಇರಬೇಕಾಗುತ್ತದೆ. ತೆಕ್ಕಟ್ಟೆ ಕೇಂದ್ರವು ಹಲವು ವಿಧದ ಸಾಂಸ್ಕøತಿಕ ಕಲಾ ಚಟುವಟಿಕೆಯನ್ನು ಹಲವು ವರ್ಷದಿಂದ ನಡೆಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಪೆರ್ಡೂರು ಮೇಳದ ಯಜಮಾನರಾದ ಕರ್ಣಾಕರ ಶೆಟ್ಟಿ ಮುಖ್ಯ ಅಭ್ಯಾಗತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರುಗಳಾದ ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನ್ನಾಡಿದರು. ಕು| ಪೂಜಾ ಆಚಾರ್ ಮತ್ತು ಕು| ಪಂಚಮಿ ವೈದ್ಯ ನಿರೂಪಣೆ ಮಾಡಿದರು. ಬಳಿಕ ಸಂಗೀತಾ ಸುಧಾ, ಯಕ್ಷಗಾನ ಪ್ರಾತ್ಯಕ್ಷಿಕೆ, ಕರಾಟೆ, ಚಿತ್ರ ನೃತ್ಯ ಪ್ರಸ್ತುತಿ, ಭರತನಾಟ್ಯ ರಂಗದಲ್ಲಿ ಪ್ರಸ್ತುತಿಗೊಂಡಿತು.

Click Here

LEAVE A REPLY

Please enter your comment!
Please enter your name here