ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡಹಡು ಹಿಂದೂ ರುದ್ರಭೂಮಿ ಅಭಿವೃದ್ಧಿ ಕುರಿತಂತೆ ಸೋಮವಾರ ಪಂಚಾಯತ್ ಆವರಣದಲ್ಲಿ ಸಭೆ ಆಯೋಜಿಸಿತು.
ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಪೂಜಾರಿ ಅಧ್ಯಕ್ಷತೆಯಲ್ಲಿ ರುದ್ರಭೂಮಿ ಅಭಿವೃದ್ಧಿ ಕುರಿತಂತೆ ಅದರ ರೂಪರೇಷೆಗಳನ್ನು ಸಿದ್ಧಪಡಿಸಿ,ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಕಾರ್ಯೊನ್ಮುಖವಾಗುವುದು ,ಉದ್ಯಮಿಗಳ ಸಹಕಾರ ಪಡೆದು ಅಲ್ಲಿನ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಬಾವಿ, ದೀಪ ಅಳವಡಿಕೆ,ಎರಡು ಪ್ರತ್ಯೇಕ ದಫನ್‍ಗೊಳಿಸುವ ಪರಿಕರ ಸಿದ್ಧಗೊಳಿಸುವ ಹೀಗೆ ಸಾಕಷ್ಟ ವಿನೂತನ ಮಾದರಿಯ ರುದ್ರಭೂಮಿಯಾಗಿಸಲು ಸಮಿತಿ ನೆತ್ರತ್ವದಲ್ಲಿ ನಿರ್ಣಯ ಕೈಗೊಂಡಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ವಿ ಆಚಾರ್ಯ,ಕಾರ್ಯದರ್ಶಿ ಚಂದ್ರಮೊಹನ್ ಪೂಜಾರಿ,ಕೋಶಾಧಿಕಾರಿ ಪ್ರತಾಪ್ ಶೆಟ್ಟಿ, ಗೌರವಾಧ್ಯಕ್ಷ ಜಿ.ವಿಠ್ಠಲ್ ಪೂಜಾರಿ, ಕೆವಿ ರಮೇಶ್ ರಾವ್,ಉಪಾಧ್ಯಕ್ಷ ಪಿ ವಿಠ್ಠಲ ಪೂಜಾರಿ, ಜೊತೆ ಕಾರ್ಯದರ್ಶಿ ವೈ.ಬಿ ರಾಘವೇಂದ್ರ,ಸದಸ್ಯರಾದ ರಾಜು ಕುಂದರ್ ಇತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಹಿಂದೂ ರುದ್ರಭೂಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.