ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ 20 ವಸಂತಗಳ ಸಡಗರ ಸಮಾರಂಭ ಇತ್ತೀಚೆಗೆ ಚೇತನಾ ಪ್ರೌಢಶಾಲೆ ಮಾಬುಕಳದ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲೆ 3182ರ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಮ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು,
ಮುಖ್ಯ ಅಭ್ಯಾಗತರಾದ ರೋಟರಿಯ ಈ ಬಾರಿಯ ಜಿಲ್ಲಾ ಯೋಜನೆಯ ನಿರ್ದೇಶಕ ಪಿ.ಡಿ.ಜಿ. ಅಭಿನಂದನ್ ಶೆಟ್ಟಿ ರೋಟರಿ ಅದರ ಬೆಳವಣಿಗೆ, ಸಾರ್ವಜನಿಕ ವಾದ ಕೊಡುಗೆ, ಅಪಾರ. ಸೇವೆ ಮತ್ತು ಸ್ನೇಹ, ಅಂತಾರಾಷ್ಟ್ರೀಯ ದೂರದರ್ಶಿತ್ವ ಕುರಿತು ಮಾತನಾಡಿದರು. ಕ್ಲಬ್‍ನ ವಿಶೇಷ ಸಂಚಿಕೆ “ಹಂಸ” ಪತ್ರಿಕೆಯನ್ನು ಸಹಾಯಕ ಗವರ್ನರ್ ಕೆ .ಪದ್ಮನಾಭ ಕಾಂಚನ್ ಬಿಡುಗಡೆ ಮಾಡಿದರು. ವಿಶೇಷವಾಗಿ ಈ ಸಂದರ್ಭದಲ್ಲಿ ಕಳೆದ 20 ವರ್ಷಗಳಿಂದ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ ರೊಟೇರಿಯನ್ನರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಹಿರಿಯರಾದ ಪಿ.ಡಿ.ಜಿ ಜ್ಞಾನ ವಸಂತ ಶೆಟ್ಟಿ, ಅಭಿನಂದನ್ ಶೆಟ್ಟಿ, ರಾಜಾರಾಮ ಭಟ್ ಗೌರವಿಸಲಾಯಿತು. ಹಂಗಾರಕಟ್ಟೆ ರೋಟರಿ ಸಂಸ್ಥೆಯ ವಿಜಯ ಮಂಜರ್ ಅಭಿನಂದನಾ ಮಾತುಗಳನ್ನಾಡಿದರು.
ವಿಂಶತಿ ಮಹೋತ್ಸವ ಸಮಿತಿ ಚೆರ್ಮೆನ್ ಚಾರ್ಟರ್ ಸದಸ್ಯ ಶ್ರೀನಿವಾಸ ಭಟ್ ,ರೋಟರಿ ಸಂಸ್ಥೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಹಿರಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ರೋಟರಿ ಜಿಲ್ಲಾ ಸಹಾಯಕ ಟ್ರೈನರ್ ದೇವಾನಂದ್, ರೋಟರಿ ವಲಯ ಪ್ರತಿನಿಧಿ, ವಿಜಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಯಶೋದ ಸಿ ಹೊಳ್ಳ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಚಾರ್ಟರ್ ಸದಸ್ಯ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರೋಟರಿ ಕ್ಲಬ್ ಉಪಾಧ್ಯಕ್ಷೆ ಸುಲತಾ ಎಸ್. ಹೆಗ್ಡೆ ವಂದಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.