ಮರವಂತೆ : ಮಾ.20ರಂದು ರಾಜ್ಯಮಟ್ಟದ ಜಲಜಾನಪದೋತ್ಸವ

0
235

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಆಧುನಿಕ ವಿಜ್ಞಾನದ ಸಂಕೀರ್ಣ ಯುಗದಲ್ಲಿ ಕನ್ನಡ ಜಾನಪದ ಪರಿಷತ್ ಜಲ ಜಾನಪದಕ್ಕೆ ಸಂಬಂಧಿಸಿ ಎರಡನೇ ಕಾರ್ಯಕ್ರಮವನ್ನು ಮರವಂತೆಯಲ್ಲಿ ಇದೇ 20ರಂದು ಆಯೋಜಿಸುತ್ತಿದೆ. ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಯುವಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಮತ್ತು ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ರಾಜ್ಯಮಟ್ಟದ ಜಲಜಾನಪದೋತ್ಸವ ಮರವಂತೆ ರಾಷ್ಟ್ರೀಯ ಹೆದ್ದಾರಿಯ ಸಮುದ್ರ ಕಿನಾರೆಯ ಸಮೀಪ ನಡೆಯಲಿದೆ ಎಂದು ಕ.ಜಾ.ಪ ಕರಾವಳಿ ವಿಭಾಗ ಸಂಚಾಲಕರಾದ ಡಾ|ಭಾರತಿ ಮರವಂತೆ ಹೇಳಿದರು.
ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರವಂತೆ ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಮುದ್ರ ಪೂಜೆ-ನದಿ ಪೂಜೆ ನಡೆಯಲಿದೆ. ಜಲ ಜಾನಪದ ಮೆರವಣಿಗೆ ನಡೆಯಲಿದೆ ಎಂದರು.

Video:-

Click Here

ಜಲಜಾನಪದೋತ್ಸವವನ್ನು ಬಂದರು ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ ಇಲಾಖೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಜಾನಪದ ಗೀತೆಗಳ ಸ್ಪರ್ಧೆಯನ್ನು ಇಂಧನ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಪುಸ್ತಕ ಪ್ರದರ್ಶನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಪಾರಂಪರಿಕ ವಸ್ತು ಪ್ರದರ್ಶನವನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಜಾನಪದ ಯುವ ಬಿಗ್ರೇಡ್ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ವಹಿಸಲಿದ್ದಾರೆ ಎಂದರು.
ಪೂರ್ವಾಹ್ನ 11-30ರಿಂದ ಜನಪದ ಕಲಾ ಪ್ರದರ್ಶನ, 12-30ರಿಂದ ಸಾಧಕರಿಗೆ ಸನ್ಮಾನ, ವಿಶೇಷ ಗೌರವ ಸಮರ್ಪಣೆ, ಮಧ್ಯಾಹ್ನ 1 ಗಂಟೆಗೆ ಜಾನಪದ ಹಾಡುಗಳ ಸ್ಪರ್ಧೆ, ಕೊರಗರ ಸಾಂಸ್ಕøತಿಕ ವೈಭವ, ಅಪರಾಹ್ನ 3.30ಕ್ಕೆ ಜಲಜಾನಪದ ಗೋಷ್ಠಿ, 5 ಗಂಟೆಯಿಂದ ಕೋಲಾಟ ಮತ್ತು ಗುಮಟೆ ನೃತ್ಯ,ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ, ಜಾನಪದ ಶೈಲಿಯಲ್ಲಿ ಸ್ತಬ್ದಚಿತ್ರ ಪ್ರದರ್ಶನ, ಕುಂದಗನ್ನಡ ಹಾಸ್ಯಲಹರಿ ನಡೆಯಲಿದೆ ಎಂದರು.
ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9ರಿಂದ ಕ್ಯಾದಗಿ ಸಾರಥ್ಯದಲ್ಲಿ ಯಕ್ಷಹಾಸ್ಯ ವೈಭವ ನಡೆಯಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಜಲಜಾನದೋತ್ಸವದ ಸಮಿತಿ ಗೌರವ ಸಲಹೆಗಾರರಾದ ಪ್ರೊ.ಕನರಾಡಿ ವಾದಿರಾಜ್ ಭಟ್, ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಇದರ ಅಧ್ಯಕ್ಷರಾದ ಜಯಶೀಲ ಶೆಟ್ಟಿ, ಜಲಜಾನಪದೋತ್ಸವ ಕಾರ್ಯಕಾರಿ ಸಮಿತಿ ಸಂಚಾಲಕ ದಯಾನಂದ ಬಳೆಗಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here